• Slide
    Slide
    Slide
    previous arrow
    next arrow
  • ಕಾಶ್ಮೀರದಲ್ಲಿ 2 ಭಯೋತ್ಪಾದಕ ಘಟಕಗಳನ್ನು ಭೇದಿಸಿ 11 ಉಗ್ರರ ಬಂಧನ

    300x250 AD

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ  ಅನಂತನಾಗ್ ಜಿಲ್ಲೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಎಂ) ನ ಎರಡು ಭಯೋತ್ಪಾದಕ ಘಟಕಗಳನ್ನು ಭೇದಿಸಿದ್ದಾರೆ ಮತ್ತು ಮೂವರು ಸಕ್ರಿಯ  ಭಯೋತ್ಪಾದಕರು ಸೇರಿದಂತೆ 11 ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ.

    ಅವರ ವಶದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    “ಅನಂತ್‌ನಾಗ್‌ನ ಶ್ರೀಗುಫ್ವಾರಾ ಬಿಜ್‌ಬೆಹರಾ ಪ್ರದೇಶಗಳಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಪೊಲೀಸ್ ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ವಿವಿಧ ಸ್ಥಳಗಳಲ್ಲಿ ಅನೇಕ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶ್ರೀಗುಫ್ವಾರಾ ಗ್ರಾಮದ ಸಖ್ರಾಸ್ ಕ್ರಾಸಿಂಗ್‌ನಲ್ಲಿ ಅಂತಹ ಚೆಕ್‌ಪೋಸ್ಟ್‌ಗಳಲ್ಲಿ ಒಂದನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಪರಾರಿಯಾಗಲು ಪ್ರಯತ್ನಿಸಿದಾಗ ಅವರನ್ನು ತಡೆದು ಬಂಧಿಸಲಾಗಿದೆ.

    300x250 AD

    ಅವರನ್ನು ವಿಚಾರಿಸಿದಾಗ ಎರಡು ಪಿಸ್ತೂಲ್ (ಚೈನೀಸ್) ಜೊತೆಗೆ ಮ್ಯಾಗಜೀನ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಶ್‌ ಎ ಮೊಹಮ್ಮದ್‌ನ ಈ ಸಹಚರರು ಪಾಕಿಸ್ಥಾನಿ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಮತ್ತು ಅವರ ಆದೇಶದ ಮೇರೆಗೆ ಅವರು ಶ್ರೀಗುಫ್ವಾರಾ ಪ್ರದೇಶದಲ್ಲಿ ಪೊಲೀಸ್ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಬಂಧಿತರನ್ನು ಫಯಾಜ್ ಅಹ್ ಖಾನ್, ಮುಂತಜೀರ್ ರಶೀದ್ ಮಿರ್, ಮೊಹಮ್ಮದ್ ಆರಿಫ್ ಖಾನ್, ಆದಿಲ್ ಅಹ್ ತಾರ್ರೆ, ಜಾಹಿದ್ ಅಹ್ಮದ್ ನಜರ್ ಎಂದು ಗುರುತಿಸಲಾಗಿದೆ ಮತ್ತು ಆರನೇಯವನು ಬಾಲಾಪರಾಧಿ. ಉಳಿದವರ ಗುರುತು ಪತ್ತೆ ನಡೆಯುತ್ತಿದೆ. ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top