• Slide
  Slide
  Slide
  previous arrow
  next arrow
 • ಉಚಿತವಾಗಿ ಈ ಶ್ರಮ ಕಾರ್ಡ,ಆರೋಗ್ಯ ಕಾರ್ಡ ನೀಡುವ ಶಿಬಿರ

  300x250 AD

  ಭಟ್ಕಳ: ಜ. 27 ರಂದು ನಮ್ಮ ನಾಡ ಒಕ್ಕೂಟ, ಭಟ್ಕಳ ಹಾಗೂ ಇನಾಯತುಲ್ಲಾ ಶಾಭಂದ್ರಿ ಅಭಿಮಾನಿ ಬಳಗದ ವತಿಯಿಂದ ಉಚಿತವಾಗಿ ಕೇದ್ರ ಸರಕಾರದ ಈ ಶ್ರಮ ಕಾರ್ಡ ಹಾಗೂ ಆರೋಗ್ಯ ಕಾರ್ಡ ನೀಡುವ ಶಿಬಿರ ಏರ್ಪಡಿಸಲಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಹೇಳಿದರು.

  ಅವರು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ಸರಕಾರದಿಂದ ಬಡವರಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಬಗ್ಗೆ ಸಾಮಾನ್ಯ ಬಡ ಬಡವರಿಗೆ ಮಾಹಿತಿ ಇಲ್ಲ. ಕೇಂದ್ರ ಸರಕಾರದ ಈ ಶ್ರಮ ಮತ್ತು ಆಯುಷ್ಮಾನ ಆರೋಗ್ಯ ಕಾರ್ಡನ್ನು ನಮ್ಮ ಸಂಘದಿಂದ ಅರ್ಹರಿಗೆ ಉಚಿತವಾಗಿ ಮಾಡಿ ಕೊಡಲಾಗುವುದು. ಸರಕಾರಿ ಉದ್ಯೋಗ ಗಿಟ್ಟಿಸಲು ತರಬೇತಿ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ನಮ್ಮ ಸಂಘದಿಂದ ಹಾಕಿಕೊಂಡಿದ್ದು ಇದರ ಪ್ರಯೋಜನವನ್ನು ಭಟ್ಕಳದ ಜನತೆ ಪಡೆಯಬೇಕೆಂದರು.

  ಈ ಸಂದರ್ಭದಲ್ಲಿ ಉಡುಪಿ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಸಮಿ ಮಾತನಾಡಿ ನಮ್ಮ ಸಂಘಟನೆಯಿಂದ ಉತ್ತರಕನ್ನಡ ಜಿಲ್ಲೆಯ 11 ತಾಲೂಕಿನಲ್ಲಿ ಈಶ್ರಮ ಮತ್ತು ಆರೋಗ್ಯ ಕಾರ್ಡ ವಿತರಿಸುವ ಶಿಬಿರ ಹಮ್ಮಿಕೊಂಡು ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡುವವರಿದ್ದೇವೆ. ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರಾದ ಕೂಲಿ ಕೆಲಸ ಮಾಡುವವರು, ಬೀದಿ ವ್ಯಾಪಾರ, ಮನೆ ಕೆಲಸ, ಹೊಲಿಗೆ ,ರಿಕ್ಷಾ ಚಾಲಕ ಸೇರಿದಂತೆ ಅನೇಕ ಕಾರ್ಮಿಕರಿಗೆ ಈ ಶ್ರಮ ಕಾರ್ಡನ್ನು ಒದಗಿಸುತ್ತಿದ್ದು ಈ ಕಾರ್ಡನಿಂದ 2 ಲಕ್ಷ ರೂ ವಿಮೆ ಹಾಗೂ ಅನೇಕ ಉಪಯೋಗಗಳು ಇದ್ದು ಇದನ್ನು ಬಡವರ ಮನೆ ಮನೆಗೆ ಮುಟ್ಟಿಸುವ ಕೆಲಸ ನಮ್ಮ ಸಂಘಟನೆಯಿಂದ ಮಾಡಲಿದ್ದೇವೆ ಎಂದರು.

  300x250 AD

  ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಎ.ಎಂ. ಮುಲ್ಲಾ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top