ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕಂಡು ಕೇಳರಿಯದ ಹಣಕಾಸಿನ ಅವ್ಯವಹಾರ ನಕಲಿ ಕಾಗದಪತ್ರಗಳ ಮೂಲಕ ಅಂದಾಜು 25 ರಿಂದ 30 ಜನರ ತಂಡದಿಂದ ಸುಮಾರು 4 – 5 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಸುದ್ದಿ ಶಿರಸಿ ನಗರದಲ್ಲಿ ಹಬ್ಬತೊಡಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ರಾಷ್ಟ್ರೀಕೃತ ಮತ್ತು ಸ್ಥಳೀಯ ಬ್ಯಾಂಕ್ ಗಳಲ್ಲಿ ವಾಹನಗಳ ಹೆಸರಿನಲ್ಲಿ ಲೋನ್ ಮಾಡುವ ಮೂಲಕ ಸಮಾನ ಮನಸ್ಕರ ತಂಡವೊಂದು ಕೋಟಿಗಟ್ಟಲೇ ಹಣವನ್ನು ಬಾಚಿಕೊಂಡಿದೆ ಎಂಬ ಸುದ್ದಿಗಳು ಎಲ್ಲೆಡೆ ಪಸರಿಸಿದೆ. ಕೆಲವು ಸರಕಾರಿ ಅಧಿಕಾರಿಗಳ ಸಹಿಗಳನ್ನೂ ಸಹ ಪೋರ್ಜರಿ ಮಾಡಿದ್ದಾರೆಯೇ ಎಂಬ ಸಂಶಯ ಸಹ ಮೂಡಿದೆ. ಇದಕ್ಕೆ ಸಂಬಂಧಿಸಿ ಸಂಬಂಧಪಟ್ಟ ಬ್ಯಾಂಕ್ ಗಳು ಯಾವ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.