ಶಿರಸಿ: ಯಾವುದೇ ವಿದ್ಯೆಯು ಜ್ಞಾನವನ್ನು ಕೊಡುತ್ತದೆ. ಆ ಜ್ಞಾನದಿಂದ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಹುಡುಕಿಕೊಳ್ಳಬೇಕು ಎಂದು ಸಾಮಾಜಿಕ ದುರೀಣ ರಾಮು ಕಿಣಿ ವಿದ್ಯಾರ್ಥಿಗಳಿಗೆ ಹೇಳಿದರು.
ಇಲ್ಲಿನ ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವಾಷಿಕೋತ್ಸವದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿ ಆರಂಭಿಸುವ ಮೊದಲು ಯಾವುದೇ ಕೆಲಸವನ್ನು ಮಾಡುವ ಮನಸ್ಸನ್ನು ಹೊಂದಬೇಕು ಎಂದರು. ಎಂಇಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಪಾಲಿಟೆಕ್ನಿಕ್ ನ ಉಪನ್ಯಾಸಕರು ನೀಡಿದ ಕೊಡುಗೆ ಕುರಿತು ಪ್ರಸಂಸೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸಮಿತಿಯ ಚೆರ್ಮನ್ ಎಲ್ ಆರ್ ಹೆಗಡೆ ಯವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಎಂ. ಆರ್. ಶೆಟ್ಟಿ ಯವರು ವಾರ್ಷಿಕ ವರದಿಯನ್ನು ಓದಿದರು. ಹಿರಿಯ ಉಪನ್ಯಾಸಕ ರಮೇಶ್ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು.