Slide
Slide
Slide
previous arrow
next arrow

ಆಂಬ್ಯುಲೆನ್ಸ್’ನಲ್ಲೇ ಹೆರಿಗೆ; ಅವಳಿ ಮಕ್ಕಳಿಗೆ ಜನನ

300x250 AD


ಯಲ್ಲಾಪುರ: ಹೆರಿಗೆಗೆಂದು ಆಸ್ಪತ್ರೆಗೆ ಕರೆತರುತ್ತಿರುವ ವೇಳೆ ಮಹಿಳೆಯೊರ್ವಳು 108 ಆಂಬ್ಯುಲೆನ್ಸ್ ನಲ್ಲಿಯೇ ಅವಳಿ ಮಕ್ಕಳನ್ನು ಹೆತ್ತಿದ್ದಾಳೆ.


ತಾಲೂಕಿನ ಕರಡೊಳ್ಳಿಯ ಸುಮಿತ್ರಾ ಶಿಂಧೆ ಎಂಬವರು ಮೂರನೇ ಹೇರಿಗೆಗೆಂದು ಆಸ್ಪತ್ರೆಗೆ 108 ವಾಹನದಲ್ಲಿ ಕರೆತರುತ್ತಿರುವ ವೇಳೆ ಜ.17ರ ಸಂಜೆ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ಅಂಬ್ಯಲೆನ್ಸ್ ಚಾಲಕ ಅನಿಲ್ ನಾಯ್ಕ, ತಂತ್ರಜ್ಞ ಶಿವಕುಮಾರ ಇಟಗಿ ಸುರಕ್ಷಿತ ಹೆರಿಗೆ ಮಾಡಿಸಿದರು. ಹೆಣ್ಣು ಹಾಗೂ ಗಂಡು ಮಗುವನ್ನು ಹೆತ್ತಿದ್ದು ಮಕ್ಕಳ ತೂಕದ ಪ್ರಮಾಣ ಕಡಿಮೆ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top