Slide
Slide
Slide
previous arrow
next arrow

12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್’ನಿಂದ ಕೊರೊನಾ ಲಸಿಕೆ ಸಾಧ್ಯತೆ

300x250 AD

ನವದೆಹಲಿ: 15-18 ವರ್ಷ ವಯಸ್ಸಿನ ಅಂದಾಜು 7.4 ಕೋಟಿ ಮಕ್ಕಳಲ್ಲಿ, 3.45 ಕೋಟಿಗೂ ಹೆಚ್ಚು ಮಕ್ಕಳು ಈಗಾಗಲೇ ತಮ್ಮ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಮುಂದಿನ ಹಂತವಾಗಿ ಭಾರತವು ಮಾರ್ಚ್‍ನಿಂದ ಕೋವಿಡ್ ವಿರುದ್ಧ 12-14 ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸುವ ಸಾಧ್ಯತೆಯಿದೆ.

ಕೋವಿಡ್-19 ವರ್ಕಿಂಗ್ ಗ್ರೂಪ್ ಎನ್‍ಟಿಎಜಿಐ ಅಧ್ಯಕ್ಷ ಡಾ ಎನ್ ಕೆ ಅರೋರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ 12-14 ವಯೋಮಾನದ ಅಂದಾಜು 7.5 ಕೋಟಿ ಜನಸಂಖ್ಯೆ ಇದೆ. ಅವರಿಗೆ ಮಾರ್ಚ್‍ನಿಂದ ಲಸಿಕೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

300x250 AD

ಇದುವರೆಗೆ 3.45 ಕೋಟಿಗೂ ಹೆಚ್ಚು ಮಕ್ಕಳು ಕೋವಾಕ್ಸಿನ್‍ನ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಅವರ ಎರಡನೇ ಡೋಸ್ 28 ದಿನಗಳಲ್ಲಿ ಬರಲಿದೆ ಎಂದಿದ್ದಾರೆ. `ಈ ವಯಸ್ಸಿನ ಮಕ್ಕಳು ಇನಾಕ್ಯುಲೇಷನ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಮತ್ತು ಜನವರಿ ಅಂತ್ಯದ ವೇಳೆಗೆ ಅವರ ಮೊದಲ ಡೋಸ್ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅವರ ಎರಡನೇ ಡೋಸ್ ಮುಂದಿನ ತಿಂಗಳು ಆರಂಭವಾಗಲಿದೆ’ ಎಂದಿದ್ದಾರೆ.

ದೇಶವು ಏಪ್ರಿಲ್ 1, 2021 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಪ್ರಾರಂಭಿಸಿತು ಮತ್ತು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಮಾಡಿಕೊಟ್ಟಿತು. 15 ಮತ್ತು 18 ವರ್ಷದೊಳಗಿನ ಮಕ್ಕಳಿಗೆ ಈ ವರ್ಷ ಜನವರಿ 3 ರಿಂದ ಲಸಿಕೆಯನ್ನು ಪ್ರಾರಂಭಿಸಲಾಯಿತು.

Share This
300x250 AD
300x250 AD
300x250 AD
Back to top