Slide
Slide
Slide
previous arrow
next arrow

ವ್ಯಕ್ತಿ ಅನುಮತಿ ಇಲ್ಲದೆ ಲಸಿಕೆ ಹಾಕುವಂತಿಲ್ಲ; ಕೇಂದ್ರಕ್ಕೆ ಸುಪ್ರೀಂ ಸ್ಪಷ್ಟನೆ

300x250 AD

ನವದೆಹಲಿ: ವ್ಯಕ್ತಿಯ ಒಪ್ಪಿಗೆಯನ್ನು ಪಡೆಯದೇ ಬಲವಂತದಿಂದ ಲಸಿಕೆಯನ್ನು ಹಾಕುವಂತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿರುವ ನಿರ್ದೇಶನ ಮತ್ತು ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ.

ಲಸಿಕೆ ಪ್ರಮಾಣಪತ್ರ ನೀಡುವ ಕುರಿತಂತೆ ದಿವ್ಯಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡುವ ವಿಷಯದ ಬಗ್ಗೆ ಹಾಗೂ ಈ ಸಂಬಂಧದ ಪ್ರಮಾಣ ಪತ್ರದ ಕಡ್ಡಾಯಗೊಳಿಸಿದ ಎಸ್‍ಒಪಿಯನ್ನು ನೀಡಲಾಗಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

ದಿವ್ಯಾಂಗರ ಮನೆಗೆ ಹೋಗಿ, ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕೆ ನೀಡಿಕೆ ಬಗ್ಗೆ ಎನ್‍ಜಿಒ ಎವಾರಾ ಫೌಂಡೇಶನ್ ಮಾಡಿದ ಮನವಿಗೆ ಪ್ರತಿಯಾಗಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೇಂದ್ರವು ಈ ಅಂಶವನ್ನು ಹೇಳಿದೆ.

300x250 AD

ವ್ಯಕ್ತಿಯ ಒಪ್ಪಿಗೆಯನ್ನು ಪಡೆಯದೇ ಬಲವಂತವಾಗಿ ಲಸಿಕೆಯನ್ನು ಹಾಕಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಂಕ್ರಾಮಿಕದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಲಸಿಕೆಯನ್ನು ಹಾಕಲಾಗುತ್ತಿದೆ. ಎಲ್ಲ ನಾಗರಿಕರು ಲಸಿಕೆ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದೆ.

Share This
300x250 AD
300x250 AD
300x250 AD
Back to top