• Slide
    Slide
    Slide
    previous arrow
    next arrow
  • ಲಸಿಕಾ ಅಭಿಯಾನಕ್ಕೆ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

    300x250 AD

    ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ನಿನ್ನೆ ಭಾರತದ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮದ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

    ಈ ಅಂಚೆ ಚೀಟಿಯು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಜನರನ್ನು ರಕ್ಷಿಸುವಲ್ಲಿ ದೇಶದಾದ್ಯಂತದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ವಿಜ್ಞಾನ ಸಮುದಾಯ ಮಾಡಿದ ಗಮನಾರ್ಹ ಕೆಲಸದ ಗೌರವಾರ್ಥವಾಗಿದೆ.

    300x250 AD

    ಡಾ.ಮಾಂಡವೀಯ ಅವರು ಮಾತನಾಡಿ, ದೇಶದ ಲಸಿಕೆ ಅಭಿಯಾನಕ್ಕೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಯೊಬ್ಬರಿಗೂ ಮಹತ್ವದ ದಿನವಾಗಿದೆ. ಪ್ರಯಾಣದುದ್ದಕ್ಕೂ ಭಾರತವು ವಿವಿಧ ಸವಾಲುಗಳನ್ನು ಎದುರಿಸಿದೆ ಆದರೆ 135 ಕೋಟಿಗೂ ಹೆಚ್ಚು ಜನರ ಸಂಕಲ್ಪ ಮತ್ತು ಸಮರ್ಪಣೆಯಿಂದ ನಾವು ಪ್ರತಿ ಸವಾಲನ್ನು ಜಯಿಸಲು ಸಾಧ್ಯ ಎಂದು ಅವರು ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top