ಪ್ರಾಯಃ ಕಂದುಕಪಾತೇನೋತ್ಪತತ್ಯಾರ್ಯಃ ಪತನ್ನಪಿ
ತಥಾ ಪತತ್ಯನಾರ್ಯಸ್ತು ಮೃತ್ಪಿಂಡಪತನಂ ಯಥಾ ||
ಆರ್ಯನಾದವನು, ಅಂದರೆ ಸಂಸ್ಕಾರವಂತನು ತನ್ನ ಜೀವನದಲ್ಲಿ ಯಾವುದೋ ಕಾರಣಕ್ಕೆ ಪತನವನ್ನು ಅಥವಾ ಅಪಜಯವನ್ನು ಕಂಡರೂ ಚೆಂಡೊಂದು ಕೆಳಕ್ಕೆ ಬಿದ್ದು ನೆಲಕ್ಕೆ ಬಡಿದು ಮತ್ತೆ ಪುಟಿದೇಳುವಂತೆ ಮೇಲಕ್ಕೆದ್ದುಬರುತ್ತಾನೆ. ಅದೇ ಅನಾರ್ಯನು, ಅಂದರೆ ಸಂಸ್ಕಾರಶೂನ್ಯನಾದವನು ನೆಲಕ್ಕೆ ಬಿದ್ದುದೇ ಆದರೆ ಕೆಳಕ್ಕೆ ಬಿದ್ದ ಮಣ್ಣಿನ ಹೆಂಟೆಯಂತೆಯೇ ಸರಿ ; ಮತ್ತೆ ಮೇಲೆದ್ದುಬರಲಾರ,
ಶ್ರೀ ನವೀನ ಗಂಗೋತ್ರಿ
ಸುವಿಚಾರ
