ಭಟ್ಕಳ: ಜ. 1ರಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಬ. ಪಾಟೀಲ ಮುನೇಕೊಪ್ಪರವರು ಜಿಲ್ಲೆಯ ಮುರ್ಡೇಶ್ವರ ಪ್ರವಾಸ ಕೈಗೊಳ್ಳಲಿದ್ದಾರೆ.
ಸಚಿವರ ಪ್ರವಾಸ ಸಮಯದಲ್ಲಿ ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಗತ್ಯ ಭದ್ರತೆ, ವಾಸ್ತವ್ಯ ಹಾಗೂ ನಿಯಮಾನುಸಾರ ಶಿಷ್ಠಾಚಾರ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ.