• Slide
    Slide
    Slide
    previous arrow
    next arrow
  • S-400 ಗಾಳಿ ಕ್ಷಿಪಣಿ ವ್ಯವಸ್ಥೆಯ ಭಾರತಕ್ಕೆ ತಲುಪಿಸಲಿದೆ ರಷ್ಯಾ

    300x250 AD

    ಮಾಸ್ಕೋ: ರಷ್ಯಾ S-400 ಟ್ರಿಂಫ್ ಮೇಲ್ಮೈಯಿಂದ ಗಾಳಿ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ತಲುಪಿಸಲು ಪ್ರಾರಂಭಿಸಿದೆ, ಈ ವಿತರಣೆಗಳು ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರಕ್ಕಾಗಿ ಫೆಡರಲ್ ಸೇವೆಯ (ಎಫ್‍ಎಸ್‍ಎಂಟಿಸಿ) ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‍ಶೋಗೆ ಮುನ್ನ ತಿಳಿಸಿದ್ದಾರೆ.

    “ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ” ಎಂದು ಶುಗೇವ್ ಹೇಳಿದ್ದಾರೆ.

    300x250 AD

    S-400 ಈಗಾಗಲೇ ಚೀನಾ ಮತ್ತು ಟರ್ಕಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿವೆ. ಅಕ್ಟೋಬರ್, 2018 ರಲ್ಲಿ ರಷ್ಯಾ ಮತ್ತು ಭಾರತ S-400 ಗಳ ವಿತರಣೆಯ ಒಪ್ಪಂದಕ್ಕೆ ಸಹಿ ಹಾಕಿದವು.

    ಆಗಸ್ಟ್‍ನಲ್ಲಿ, ರಷ್ಯಾದ ಸರ್ಕಾರಿ ಶಸ್ತ್ರಾಸ್ತ್ರ ರಫ್ತುದಾರರಾದ ರೊಸೊಬೊರೊನೆಕ್ಸ್‍ಪೆÇೀರ್ಟ್‍ನ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೀವ್ ಅವರು ಸ್ಪುಟ್ನಿಕ್‍ಗೆ S-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯ ಕುರಿತು ಮಧ್ಯಪ್ರಾಚ್ಯ, ಏಷ್ಯಾ-ಪೆಸಿಫಿಕ್ ಪ್ರದೇಶ ಮತ್ತು ಆಫ್ರಿಕಾದ ಏಳು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದರು.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top