Slide
Slide
Slide
previous arrow
next arrow

ತಿರುಪತಿಯಲ್ಲಿ ಬ್ಯಾಟರಿ-ಸ್ವಾಪಿಂಗ್ ಕೇಂದ್ರ ಆರಂಭ

300x250 AD

ಹೈದರಾಬಾದ್: ದೇಗುಲ ನಗರಿ ತಿರುಪತಿಯನ್ನು ಶೂನ್ಯ ಹೊರಸೂಸುವಿಕೆ ವಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (NREDCAP) ತಿರುಪತಿಯಲ್ಲಿ ಬ್ಯಾಟರಿ-ಸ್ವಾಪಿಂಗ್ ಕೇಂದ್ರವನ್ನು ಉದ್ಘಾಟಿಸಿದೆ.

ಮುಂಬರುವ ತಿಂಗಳುಗಳಲ್ಲಿ ನಗರದಲ್ಲಿ 20 `ಹಾಟ್-ಸ್ವಾಪ್ ಸ್ಟೇಷನ್’ಗಳು ಮತ್ತು 200 ವಾಹನಗಳಿಗೆ ಬ್ಯಾಟರಿ ವಿನಿಮಯ ಜಾಲವನ್ನು ವಿಸ್ತರಿಸುವ ಯೋಜನೆಯೊಂದಿಗೆ, NREDCAP ತಿರುಪತಿ ರೈಲು ನಿಲ್ದಾಣ, APSRTC ಕೇಂದ್ರ ಬಸ್ ನಿಲ್ದಾಣ, ಅಲಿಪಿರಿ, ಶ್ರೀನಿವಾಸ ಮಂಗಳಪುರಂ, ಶ್ರೀಕಾಳಹಸ್ತಿ ಮತ್ತು ಕಾಣಿಪಾಕಂನಲ್ಲಿ ಸ್ವಾಪ್ ನಿಲ್ದಾಣಗಳನ್ನು ನಿರ್ಮಿಸಲಿದೆ.

ವಿಶಾಖಪಟ್ಟಣಂ, ವಿಜಯವಾಡ, ಕಾಕಿನಾಡ ಮತ್ತು ರಾಜಮಹೇಂದ್ರವರಂಗೆ ಹಂತ ಹಂತವಾಗಿ ಜಾಲವನ್ನು ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

300x250 AD

“ಬ್ಯಾಟರಿ ವಿನಿಮಯ, ಪ್ಲಗಿಂಗ್ ಕನೆಕ್ಟರ್‍ಗಳ ರೂಪದಲ್ಲಿ ಮಾನವನ ಹಸ್ತಕ್ಷೇಪವನ್ನು ತೊಡೆದುಹಾಕುವ ಪ್ರಕ್ರಿಯೆಯು ಆಟೋ ವಲಯದಲ್ಲಿ ಆರ್ಥಿಕ ಉತ್ತೇಜನ ನೀಡುತ್ತದೆ ಏಕೆಂದರೆ ಅವರ ಕಾರ್ಯಾಚರಣೆಯ ವೆಚ್ಚವು 30 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಮತ್ತು ಅವರ ಗಳಿಕೆಗಳು ಹೆಚ್ಚಾಗಲು ಪ್ರಾರಂಭವಾತ್ತದೆ” ಎಂದು NREDCAP ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆಟೋರಿಕ್ಷಾವು ಡಿಸ್ಚಾರ್ಜ್ ಆದ ಬ್ಯಾಟರಿಯನ್ನು ಕೇವಲ ಎರಡು ನಿಮಿಷಗಳಲ್ಲಿ ಚಾರ್ಜ್ ಮಾಡಿದ ಬ್ಯಾಟರಿಗೆ ಬದಲಾವಣೆ ಮಾಡಿಕೊಳ್ಳಬಹುದು ಮತ್ತು ಆನ್‍ಲೈನ್‍ನಲ್ಲಿ ಪಾವತಿಸಬಹುದು” ಎಂದು RACEnergy ನ ಸಹ-ಸಂಸ್ಥಾಪಕ ಅರುಣ್ ಶ್ರೇಯಸ್ ಹೇಳಿದ್ದಾರೆ.

ಹಿಂದಿನ 2019 ರಲ್ಲಿ, ಅಮರಾನ್ ಬ್ಯಾಟರಿಗಳು ತಿರುಪತಿ ಮುನ್ಸಿಪಲ್ ಕಾಪೆರ್Çರೇಶನ್ ಸಹಭಾಗಿತ್ವದಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಆರಂಭಿಸಿತ್ತು, ದೇವಾಲಯದ ನಗರದಲ್ಲಿ ಕೇವಲ ಮಹಿಳಾ ಚಾಲಕರನ್ನು ಹೊಂದಿರುವ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಬ್ಯಾಟರಿ ವಿನಿಮಯ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು.
ನ್ಯೂಸ್ 13

Share This
300x250 AD
300x250 AD
300x250 AD
Back to top