ಕಾರವಾರ: ಡಿವೈಎಸ್‍ಪಿ ಅರವಿಂದ ಕಲಗುಜ್ಜಿ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ವೆಲೆಂಟೈನ್ ಡಿಸೋಜಾ ಅವರನ್ನು ನೇಮಕ ಮಾಡಿ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ವೆಲೆಂಟೈನ್ ಡಿಸೋಜಾ ಅವರು ಮಂಗಳೂರದ ಪೆÇಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದು ಸ್ಥಳ ನಿರೀಕ್ಷಣೆಯಲ್ಲಿ ಇದ್ದರು. ಇದೀಗ ಇವರನ್ನು ಕಾರವಾರದ ಡಿವೈಎಸ್‍ಪಿಯಾಗಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಡಿವೈಎಸ್‍ಪಿ ಅರವಿಂದ ಕಲಗ್ಗುಜಿ ಅವರನ್ನು ಎಎನ್‍ಎಫ್ ಕಾರ್ಕಳಕ್ಕೆ ವರ್ಗಾವಣೆ ಮಾಡಲಾಗಿದೆ.