• Slide
    Slide
    Slide
    previous arrow
    next arrow
  • FATF ಗ್ರೇ ಪಟ್ಟಿಯಲ್ಲೇ ಪಾಕಿಸ್ತಾನ ಮುಂದುವರಿಕೆ

    300x250 AD

    ನವದೆಹಲಿ: ಫಿನಾನ್ಶಿಯಲ್ ಟಾಸ್ಕ್ ಫೋರ್ಸ್ (FATF) ಪಾಕಿಸ್ಥಾನವನ್ನು ಗ್ರೇ ಪಟ್ಟಿಯಲ್ಲಿ ಮುಂದುವರೆಸಿದೆ. ನಿನ್ನೆ ಪ್ಯಾರಿಸ್‌ನಲ್ಲಿ ನಡೆದ ಜಾಗತಿಕ ಭಯೋತ್ಪಾದಕ ಹಣಕಾಸು ನಿಗಾ ದಳದ ಮೂರು ದಿನಗಳ ಸುದೀರ್ಘ ಅಧಿವೇಶನದ ನಂತರ ಈ ನಿರ್ಧಾರವನ್ನು FATF ಅಧ್ಯಕ್ಷ ಮಾರ್ಕಸ್ ಪ್ಲೆಯರ್ ಈ ನಿರ್ಧಾರವನ್ನು ಘೋಷಿಸಿದರು.

    ಎಫ್‌ಎಟಿಎಫ್ ನೀಡಿದ 34 ಅಂಶಗಳ ಕ್ರಿಯಾ ಯೋಜನೆಯಲ್ಲಿ ಪಾಕಿಸ್ಥಾನ ಸರ್ಕಾರವು ನಾಲ್ಕು ಕ್ರಿಯಾ ಅಂಶಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಮೂರು ಇತರ ದೇಶಗಳಾದ ಟರ್ಕಿ, ಮಾಲಿ ಮತ್ತು ಜೋರ್ಡಾನ್ ಅನ್ನು ಕೂಡ FATF ಗ್ರೇ ಪಟ್ಟಿಗೆ ಸೇರಿಸಲಾಗಿದೆ.

    ತಾಲಿಬಾನ್ ರಾಷ್ಟ್ರದ ಮೇಲೆ ಹಿಡಿತ ಸಾಧಿಸಿದ ನಂತರ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಬೆಳೆಯುತ್ತಿರುವ ಹಣಕಾಸು ವಂಚನೆ ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಅಪಾಯದ ವಾತಾವರಣದ ಬಗ್ಗೆ FATF ಕಳವಳ ವ್ಯಕ್ತಪಡಿಸಿದೆ.

    300x250 AD

    ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ ವಿಶ್ವಸಂಸ್ಥೆ ಪರಿಗಣಿತ ಭಯೋತ್ಪಾದಕ ಗುಂಪುಗಳ ಹಿರಿಯ ನಾಯಕತ್ವದ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂಬುದನ್ನು ಪಾಕಿಸ್ಥಾನ ಮತ್ತಷ್ಟು ಸಾಬೀತಪಡಿಸಬೇಕಾಗಿದೆ ಎಂದು FATF ಅಧ್ಯಕ್ಷರು ಹೇಳಿದ್ದಾರೆ. ಮಸೂದ್ ಅಜರ್ 2008 ರ ಮುಂಬೈ ಭಯೋತ್ಪಾದಕ ದಾಳಿ, 2016 ಪಠಾಣ್ ಕೋಟ್ ದಾಳಿ ಮತ್ತು 2019 ರ ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ.

    ಪಾಕಿಸ್ತಾನವು ಜೂನ್ 2018 ರಲ್ಲಿ ಎಫ್‌ಎಟಿಎಫ್‌ನ ಗ್ರೇ ಲಿಸ್ಟ್‌ನಲ್ಲಿ ಇದೆ. ಭಯೋತ್ಪಾದನೆಗೆ ಹಣ ವರ್ಗಾವಣೆಯನ್ನು ತಡೆಯಲು ವಿಫಲವಾದ ಕಾರಣ ಗ್ರೇ ಪಟ್ಟಿಗೆ‌ ಸೇರಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top