ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ- 1, ಅರಿಶಿಣ- 1/4 ಚಮಚ, ಸಾಂಬಾರ್ ಪುಡಿ- 1/4 ಚಮಚ, ಮೆಣಸಿನ ಪುಡಿ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- 2 ಚಮಚ, ಸಾಸಿವೆ- 1 ಚಮಚ, ಉದ್ದಿನ ಬೇಳೆ- 1/2 ಚಮಚ, ಜೀರಿಗೆ- 1/2 ಚಮಚ, ಸೋಂಪಿನ ಕಾಳು- 1/2 ಚಮಚ, ಕೆಂಪು ಮೆಣಸಿನ ಕಾಯಿ- 1, ಇಂಗು- ಸ್ವಲ್ಪ, ಕರಿಬೇವು- ಸ್ವಲ್ಪ
ಮಾಡುವ ವಿಧಾನ: ಬಾಳಿಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಅರಿಶಿಣ, ಸಾಂಬಾರ್ ಪುಡಿ, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕಲಸಿಟ್ಟುಕೊಳ್ಳಿರಿ. ಒಂದು ಪಾತ್ರೆಯಲ್ಲಿ ಕಾದ ಎಣ್ಣಿಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಸೋಂಪು ಕಾಳು, ಕೆಂಪು ಮೆಣಸು, ಇಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ, ನಂತರ ಮಿಶ್ರಣ ಮಾಡಿದ ಬಾಳೆಕಾಯಿಯನ್ನು ಪಾತ್ರೆಗೆ ಹಾಕಿ ಸ್ವಲ್ಪ ನೀರು ಮತ್ತು ಒಗ್ಗರಣಿ ಸೇರಿಸಿ 10 ನಿಮಿಷ ಕುದಿಸಿ ಈಗ ಬಾಳೆಕಾಯಿ ಫ್ರೈ ಸವಿಯಲು ಸಿದ್ಧ.