ಶಿರಸಿ: ಬದುಕಿನಲ್ಲಿ ಕಂಡುಕೊಂಡ ಸತ್ಯವನ್ನು ಹಂಚಿಕೊಳ್ಳುವುದು ಸಾಹಿತ್ಯ .ಸಾಹಿತ್ಯ ,ಸಂಗೀತ ಮಾನವೀಯ ಗುಣವನ್ನು ಬಿತ್ತಬೇಕು ಸಾಹಿತ್ಯದ ಜೊತೆಗೆ ವ್ಯಕ್ತಿತ್ವವು ಇರುತ್ತದೆ. ಇತ್ತೀಚಿಗೆ ಎಲ್ಲವೂ ಯಾಂತ್ರಿಕವಾಗುತ್ತಿದ್ದು ,ಹೃದಯ ಸಂಬಂಧ ಕಡಿಮೆಯಾಗುತ್ತಿದೆ ಎಂದು ಖ್ಯಾತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ್ ಅಭಿಪ್ರಾಯಪಟ್ಟರು. ಅವರು ಕವಿ ಕಾವ್ಯ ಬಳಗದ ಹದಿನಾರನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕವಿ ಕಾವ್ಯ ಬಳಗ ಒಂದು ಅಭಿವ್ಯಕ್ತಿಯಾಗಿದೆ .ಕಾವ್ಯದ ರಸ ಧಾರೆ ಹರಿಯಲು ಸಹಕಾರಿಯಾಗಿದೆ ಎಂದು ನಿವೃತ್ತ ಶಿಕ್ಷಕರಾದ ಎಸ್.ಎಸ್. ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ.ವಿಜಯ ನಳಿನಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಪ್ರಾರ್ಥಿಸಿದರು. ಕವಿ ಕಾವ್ಯ ಬಳಗದ ಸಂಚಾಲಕಿ ಎನ್.ಆರ್.ರೂಪಶ್ರೀ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.