ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಹೊಟೆಲ್ ಸಾಮ್ರಾಟ್, ವಿನಾಯಕ ಹಾಲ್, ಶಿರಸಿಯಲ್ಲಿ ಮೇ 11 ಹಾಗೂ 12 ರಂದು ಭಟ್ ಚೆಸ್ ಸ್ಕೂಲ್ ನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಪಂದ್ಯಾವಳಿಯು ಫಿಡೆ ಸ್ವಿಸ್ ಲೀಗ್ ಮಾದರಿಯಲ್ಲಿ ಜರುಗಿತು. ಮತ್ತು ಪ್ರತಿಯೊಂದು ವಯೋಮಿತಿಯ ಇಬ್ಬರು ಆಟಗಾರರನ್ನು ರಾಜ್ಯ ಚಾಂಪಿಯಶಿಪ್ ಗೆ ಆಯ್ಕೆ ಮಾಡಲಾಯಿತು. ತೀರ್ಪುಗಾರ ಆನಂದ ಸ್ವಾಮಿ ಈ ಕೆಳಗಿನಂತೆ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. 15 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ, ಪ್ರಥಮ ಸ್ಥಾನ ಕು. ಅಭಿನೀತ್ ಭಟ್, ದ್ವಿತೀಯ ಕು.ಆಶ್ರಿತ್, ಜಿ ಇವರುಗಳು ಪಡೆದರೆ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಕು, ಸಿಂಚನ ಭಟ್, ದ್ವಿತೀಯ ಕು. ಭೂಮಿಕ ಪಿ. ಹೆಗಡೆ ಇವರುಗಳು ಪಡೆದರು. 13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ, ಪ್ರಥಮ ಸ್ಥಾನ ಕು. ಅಭಿನೀತ್ ಭಟ್, ದ್ವಿತೀಯ ಕು. ಅನಿರುದ್ಧ ಎಮ್.ಭಟ್ ಇವರುಗಳು ಪಡೆದರೆ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಕು. ನಿಯತಿ. ಎಮ್, ದ್ವಿತೀಯ ಕು. ಅನ್ವಿತಾ ಎನ್. ಹೆಗಡೆ ಇವರುಗಳು ಪಡೆದರು. 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ, ಪ್ರಥಮ ಸ್ಥಾನ ಕು. ನೇಸರ ಹೆಗಡೆ, ದ್ವಿತೀಯ ಕು. ಸ್ವಸ್ತಿಕ್ ಶೆಟ್ಟಿ ಇವರುಗಳು ಪಡೆದರೆ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಕು, ದೀಪಿಕಾ ಪಿ.ಹೆಗಡೆ, ದ್ವಿತೀಯ ಕು. ಸಮೃದ್ಧಿ ರೇವಣ್ಕರ ಇವರುಗಳು ಪಡೆದರು.
9 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ, ಪ್ರಥಮ ಸ್ಥಾನ ಕು. ಸ್ವಸ್ತಿಕ್ ವಿ ಶೆಟ್ಟಿ, ದ್ವಿತೀಯ ಕು. ಚಿಂತನ್ ಭಟ್ ಇವರುಗಳು ಪಡೆದರು.7 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ, ಪ್ರಥಮ ಸ್ಥಾನ ಕು. ಪ್ರಭಾತ್ ವಾಯ್.ಭಟ್, ದ್ವಿತೀಯ ಕು. ಸಂಕಲ್ಪ ಎಸ್. ಶೆಟ್ಟರ್ ಇವರುಗಳು ಪಡೆದರೆ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಕು. ಸಾದ್ವಿ ಹಳ್ಳಿ, ದ್ವಿತೀಯ ಕು. ಖುಷಿ ಕಾಂಬ್ಳೆ ಇವರುಗಳು ಪಡೆದರು. ಸದಾನಂದ ಆರ್. ಹೆಬ್ಬಾರ್(ನಿವೃತ್ತ ಮುಖ್ಯಾಧ್ಯಾಪಕರು, ಧಮನಬೈಲ್ ಶಾಲೆ) ರವೀಂದ್ರ ಜೋಷಿ (ಅಂತಾರಾಷ್ಟ್ರೀಯ ಶ್ರೇಯಾಂಕಿತ ಆಟಗಾರ) ರಾಮಚಂದ್ರ ಭಟ್ (ಉಪಾಧ್ಯಕ್ಷರು, ಉ.ಕ ಜಿಲ್ಲಾ ಚದುರಂಗ ಸಂಘ) ನವೀನ ಎಸ್. ಹೆಗಡೆ(ಕಾರ್ಯದರ್ಶಿ, ಉ.ಕ ಜಿಲ್ಲಾ ಚದುರಂಗ ಸಂಘ) ವಿಜೇತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.