ಸುವಿಚಾರ

​ಅತಿ ತೃಷ್ಣಾ ನ ಕರ್ತವ್ಯಾ ತೃಷ್ಣಾಂ ನೈವ ಪರಿತ್ಯಜೇತ್

ಶನೈಃ ಶನೈಶ್ಚ ಭೋಕ್ತವ್ಯಂ ಸ್ವಯಂ ವಿತ್ತಮುಪಾರ್ಜಿತಮ್

ಬಯಕೆ, ಆಸೆ, ಕಾಮ, ಇಚ್ಛಾ ಅನ್ನುವುದೇನಿದೆ ಅದು ಬದುಕಿನ ಚಾಲಕ ಶಕ್ತಿ. ಅದನ್ನು ತೊರೆದು ಬದುಕಲಾಗದು, ಅಥವಾ ಅದನ್ನು ತೊರೆದರೆ ಬದುಕೇ ಇರದು. ಹಾಗಂತ ಅದನ್ನೇ ಬದುಕು ಅಂದುಕೊಂಡು ಅದಕ್ಕೊಂದಕ್ಕಾಗಿಯೇ ಬದುಕಲೂ ಬಾರದು. ತಾನು ಶ್ರಮಪಟ್ಟು ಧರ್ಮ ಮಾರ್ಗದಿಂದ ಗಳಿಸಿದ ಧನವನ್ನು ಸ್ವಲ್ಪ ಸ್ವಲ್ಪವಾಗಿ ಆತುರಕ್ಕೊಳಗಾಗಿದೆ ಬಳಸಿಕೊಂಡು ಬದುಕಿನ ಬಯಕೆಯನ್ನು ತಣಿಸಿಕೊಳ್ಳಬೇಕು.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.