ಸುವಿಚಾರ

ನಾಸ್ತಿ ವಿದ್ಯಾಸಮಂ ಚಕ್ಷುಃ ನಾಸ್ತಿ ಸತ್ಯಸಮಃ ತಪಃ

ನಾಸ್ತಿ ರಾಗಸಮಂ ದುಃಖಂ ನಾಸ್ತಿ ತ್ಯಾಗಸಮಂ ಸುಖಮ್ !

ವಿದ್ಯೆಯಂಥಾ ಕಂಗಳು ಇನ್ನಿಲ್ಲ, ಹಾಗೇ ಸತ್ಯವನ್ನೇ ಆಡುತ್ತ ಬದುಕುವಷ್ಟು ಮಿಗಿಲಾದ ತಪಸ್ಸು ಬೇರೆಯಿಲ್ಲ. (ತಪಸ್ಸೆಂದರೆ ತನ್ನನ್ನು ಸಂತಾಪಕ್ಕೆ ಗುರಿಯಾಗಿಸುವ ಕ್ರಿಯೆ). ಹಾಗೇನೆ, ಯಾವುದನ್ನೋ ಪ್ರೀತಿಸುವುದು ಅಥವಾ ಅಂಟಿಕೊಳ್ಳುವುದಕ್ಕೆ ಸಮವಾದ ನೋವು ಇನ್ನೊಂದಿಲ್ಲ; ಒಂದಲ್ಲ ಒಂದುದಿನ ಅದು ನೋವು ತರುತ್ತದೆ. ಯಾವುದನ್ನೂ ಅಂಟಿಸಿಕೊಳ್ಳದೆ ತ್ಯಾಗ ಮಾಡಿ ಬದುಕುವಲ್ಲಿನ ಸುಖವೂ ಬೇರೆಡೆಗಿಲ್ಲ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.