• Slide
  Slide
  Slide
  previous arrow
  next arrow
 • ದೇಶ, ರಾಜ್ಯ ಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯ ಮಹತ್ವದ್ದು; ಹೊರಟ್ಟಿ

  300x250 AD

  ಕಾರವಾರ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ದೇಶ, ರಾಜ್ಯಗಳ ಅಭಿವೃದ್ಧಿಯಲ್ಲಿ ಸಹಭಾಗಿಯಾಗಿದ್ದು ಈ ಸಮಿತಿಯ ಕಾರ್ಯ ನಿರ್ವಹಣೆಯ ಜವಾಬ್ದಾರಿ ಮಹತ್ವದ್ದು, ಜೊತೆಯಲ್ಲಿ ರಾಜ್ಯ, ದೇಶಗಳ ಅಭಿವೃದ್ಧಿಗೆ ಆರ್ಥಿಕ ಶಿಸ್ತು ಅತೀ ಮುಖ್ಯ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದರು.


  ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಸಮಾರಂಭದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪಾತ್ರ ವಿಷಯದ ಕುರಿತುತಮ್ಮ ವಿಚಾರಧಾರೆಯನ್ನು ಮಂಡಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸರಕಾರಗಳು ಕೈಗೊಂಡ ಖರ್ಚು, ವೆಚ್ಚಗಳ ಮೇಲೆ ನಿಗಾ ಇಡುವ ಹಾಗೂ ಕರದಾತರ ಹಣದ ಸದ್ಬಳಕೆ ಕುರಿತು ಕಣ್ಗಾವಲು ಇಡುವ ಮಹತ್ವದ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಪಕ್ಷ ಬೇಧ ಮರೆತು ಸಮಿತಿಯ ಪದಾಧಿಕಾರಿಗಳು ಸಾರ್ವಜನಿಕರ ಹಣ ಅನಾವಶ್ಯಕವಾಗಿ ಪೆÇೀಲಾಗದಂತೆ ಪಾರರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆದ್ಯತೆ ನೀಡಬೇಕು ಎಂದರು.

  300x250 AD


  ತೆರಿಗೆ ಸೋರಿಕೆತಡೆಯುವಲ್ಲಿ, ಕಡಿಮೆ ಕರ ಆಕರಣೆ ಹಾಗೂ ನಿರ್ಧರಣೆಯ ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ನೇರತೆರಿಗೆಯಾಗಿರುವ ಆದಾಯ ತೆರಿಗೆ ಮತ್ತು ಪರೋಕ್ಷ ತೆರಿಗೆಯಾಗಿರುವಜಿ.ಎಸ್.ಟಿ., ಸೀಮಾ ಸುಂಕ, ಅಬಕಾರಿ ಸುಂಕ ಸೇರಿದಂತೆ ಅನೇಕ ತೆರಿಗೆ ವ್ಯವಸ್ಥೆಗಳ ಕಾರ್ಯ ಪದ್ಧತಿ ಮಿಮರ್ಶೆ ಮತ್ತು ಸಮರ್ಪಕಕಾರ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
  ಅಭಿವೃದ್ಧಿ ಕಾರ್ಯಗಳು ನಿಗದಿತ ಸಮಯದಲ್ಲಿ ಪ್ರಾರಂಭಗೊಂಡು ಕಾಲ ಮಿತಿಯಲ್ಲಿ ಮುಕ್ತಾಯಗೊಂಡ ಬಗ್ಗೆ ವಿಚಕ್ಷಣ ನಡೆಸುವ ಮೂಲಕ ದೇಶ, ರಾಜ್ಯಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಹತ್ವದಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ಎಂದರು.
  ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯ ಸಭೆಯ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಅಧೀರರಂಜನ್ ಚೌಧರಿ ಸೇರಿದಂತೆ ದೇಶದಎಲ್ಲ ರಾಜ್ಯಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಅಧ್ಯಕ್ಷರು, ಸದಸ್ಯರುಗಳು ಹಾಗೂ ಎಲ್ಲ ರಾಜ್ಯಗಳ ಪೀಠಾಸೀನಾಧಿಕಾರಿಗಳು ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top