Slide
Slide
Slide
previous arrow
next arrow

35 ಜಿಲ್ಲೆಯ ಪಿಎಸ್‍ಎ ಆಮ್ಲಜನಕ ಘಟಕ ಲೋಕಾರ್ಪಣೆಗೊಳಿಸಿದ ಪಿಎಂ ಮೋದಿ

300x250 AD

ನವದೆಹಲಿ: 35 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂ ಕೇರ್ಸ್ ನಿಂದ ನಿರ್ಮಿಸಿರುವ ಒತ್ತಡ ಹೀರಿಕೊಳ್ಳುವ [ಪಿಎಸ್‍ಎ] ಆಮ್ಲಜನಕ ಘಟಕಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಉತ್ತರಾಖಂಡದ ರಿಷಿಕೇಶ್ ದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇವುಗಳನ್ನು ಉದ್ಘಾಟಿಸಿದರು. ಈ ಮೂಲಕ ದೇಶದ ಎಲ್ಲಾ ಜಿಲ್ಲೆಗಳು ಪಿಎಸ್‍ಎ ಆಮ್ಲಜನಕ ಘಟಕಗಳನ್ನು ಹೊಂದಿದಂತಾಗಿದೆ.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಕೋವಿಡ್ -19 ವಿರುದ್ಧ ಹೋರಾಡುವ ಸೌಲಭ್ಯಗಳನ್ನು ಒದಗಿಸುವ ಭಾರತದ ಸಾಮಥ್ರ್ಯವನ್ನು ಪ ಶ್ಲಾಘಿಸಿದರು ಮತ್ತು ದೇಶವು ಇವುಗಳ ರಫ್ತುದಾರನಾಗುತ್ತಿದೆ ಎಂದು ಹೇಳಿದ್ದಾರೆ.

“ಇಷ್ಟು ಕಡಿಮೆ ಅವಧಿಯಲ್ಲಿ, ಭಾರತ ಲಭ್ಯಗೊಳಿಸಿದ ಸೌಲಭ್ಯಗಳು ದೇಶದ ಸಾಮಥ್ರ್ಯವನ್ನು ತೋರಿಸುತ್ತದೆ. 1 ಪರೀಕ್ಷಾ ಪ್ರಯೋಗಾಲಯದಿಂದ 3,000 ಪರೀಕ್ಷಾ ಪ್ರಯೋಗಾಲಯಗಳ ನೆಟ್‍ವರ್ಕ್ ಸ್ಥಾಪನೆ ಮತ್ತು ಮುಖಗವಸುಗಳು ಮತ್ತು ಕಿಟ್‍ಗಳ ಆಮದಿನಿಂದ ಅದರ ಉತ್ಪಾದನೆಯವರೆಗೆ, ಭಾರತವು ರಫ್ತುದಾರನಾಗಿ ವೇಗವಾಗಿ ಮುಂದುವರಿಯುತ್ತಿದ”ಎಂದು ಮೋದಿ ಹೇಳಿದ್ದಾರೆ.

ದೇಶಾದ್ಯಂತ 1224 ಪಿಎಸ್‍ಎ ಆಮ್ಲಜನಕ ಘಟಕಗಳನ್ನು ಪಿಎಂ ಕೇರ್ಸ್ ನಿಂದ ನಿರ್ಮಿಸಲಾಗಿದೆ. ಈ ಪೈಕಿ 1100 ಘಟಕಗಳು ಈಗಾಗಲೇ ಕಾರ್ಯಾರಂಭಮಾಡಿವೆ. ಇವುಗಳಿಂದ 1750 ಮೆಟ್ರಿಕ್ ಟನ್ ಆಮ್ಲಜನಕವನ್ನು ಪ್ರತಿದಿನ ಉದ್ಘಾಟಿಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಕಂಡು ಬಂದ ನಂತರ ಭಾರತದ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮಗಳಿಗೆ ಇದು ಸಾಕ್ಷಿಯಾಗಿದೆ.

300x250 AD

ಗುಡ್ಡಗಾಡು ಪ್ರದೇಶಗಳು, ದ್ವೀಪಗಳು ಮತ್ತು ದುರ್ಗಮ ಭೂ ಪ್ರದೇಶಗಳನ್ನೊಳಗೊಂಡ ಸಂಕಿರ್ಣ ಸವಾಲುಗಳಿರುವ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಕಾರ್ಯಗತಗೊಳಿಸಲಾಗಿದೆ.

ಈ ಘಟಕಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 7,000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ಸಂಯೋಜಿತ ವೆಬ್ ಪೆÇೀರ್ಟಲ್ ಮೂಲಕ ನೈಜ ಸಮಯದಲ್ಲಿ ತಮ್ಮ ಕಾರ್ಯ ಹಾಗೂ ಕಾರ್ಯಕ್ಷಮತೆಯ ಮೇಲ್ವಿಚಾರಣೆಗಾಗಿ ಅಂತರ್ಗತವಾಗಿರುವ ಇಂಟರ್ ನೆಟ್ ಆಫ್ ಥಿಂಗ್ಸ್ [ಐಒಟಿ] ಸಾಧನವನ್ನು ಸಹ ಅಳವಡಿಸಲಾಗಿದೆ.

Share This
300x250 AD
300x250 AD
300x250 AD
Back to top