Slide
Slide
Slide
previous arrow
next arrow

ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಆಸ್ಪತ್ರೆ ಸೇರಿಸಿದವರಿಗೆ ಸರ್ಕಾರದಿಂದ ಬಹುಮಾನ

300x250 AD

ನವದೆಹಲಿ: ರಸ್ತೆ ಅಪಘಾತಕ್ಕೆ ಒಳಗಾದವರನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಿ ಜೀವ ಕಾಪಾಡಲು ಪ್ರಯತ್ನಿಸುವ ಉತ್ತಮ ಜನರಿಗಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ.

ಈ ಯೋಜನೆಯಡಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡವರನ್ನು `ಗೋಲ್ಡನ್ ಅವರ್’ ಒಳಗಡೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವವರಿಗೆ 5000 ರೂಪಾಯಿಗಳ ಬಹುಮಾನ ದೊರೆಯಲಿದೆ.

2021ರ ಅಕ್ಟೋಬರ್ 15ರಿಂದ 2026ರ ಮಾರ್ಚ್ 31ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ ಎಂದು ಸಚಿವಾಲಯವು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

300x250 AD

ಇಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಈ ರೀತಿಯ 10 ಅತ್ಯುತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಮತ್ತು 1 ಲಕ್ಷ ರೂಪಾಯಿಗಳ ಬಹುಮಾನವನ್ನು ಕೂಡ ನೀಡಲಾಗುತ್ತದೆ.

ಆರಂಭಿಕ ಅನುದಾನವಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ 5 ಲಕ್ಷ ರೂಪಾಯಿಗಳನ್ನು ಈ ಉದ್ದೇಶಕ್ಕಾಗಿ ಒದಗಿಸಲಿದೆ.

ರಸ್ತೆ ಅಪಘಾತಕ್ಕೊಳಗಾದವರನ್ನು ಕ್ಷಿಪ್ರಗತಿಯಲ್ಲಿ ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರನ್ನು ಪ್ರೇರಿಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Share This
300x250 AD
300x250 AD
300x250 AD
Back to top