Slide
Slide
Slide
previous arrow
next arrow

ವಿವಿಧ ಹೂವಿನಲಂಕಾರದಲ್ಲಿ ಕಂಗೊಳಿಸಿದ ಶ್ರೀ ಸಾಣಿ ಅಮ್ಮ ದೇವಿ

300x250 AD

ಕುಮಟಾ: ಪಟ್ಟಣದ ಹಳೇ ಹೆರವಟ್ಟಾದಲ್ಲಿ ನೆಲೆಸಿರುವ ಶ್ರೀ ಸಾಣಿ ಅಮ್ಮ ದೇವಸ್ಥಾನದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಹೂವಿನ ಪೂಜೆ ನೆರವೇರಿಸಿದರು.

300x250 AD

ಭಕ್ತರು ನೀಡಿದ ವಿವಿಧ ಬಗೆಯ ಹೂವಿನಿಂದ ದೇವಿಯನ್ನು ಶೃಂಗರಿಸಲಾಯಿತು. ಹಣ್ಣು-ಕಾಯಿ ಸೇವೆ ಸಲ್ಲಿಸಿದ ಭಕ್ತರು ದೇವಿಗೆ ಉಡಿ ಸೇವೆ ನೀಡಿದರು. ಗೃಹಿಣಿಯರು ಅರಿಶಿಣ ಕುಂಕುಮ ಸೇವೆ ಗೈದರು. ಅರ್ಚಕರು ವಿವಿಧ ದೈವಿ ಕೈಂಕರ್ಯಗಳನ್ನು ನೆರವೇರಿಸಿದರು. ದೇವಿಗೆ ಮಾಡಲಾದ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಸಂಜೆ ದೇವಸ್ಥಾನದಲ್ಲಿ ಹೂವಿನ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಿಸಲಾಯಿತು. ಹೂವಿನ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೀವಿಯ ದರ್ಶಪಡೆದು ಪುನೀತರಾದರು

Share This
300x250 AD
300x250 AD
300x250 AD
Back to top