• first
    second
    third
    previous arrow
    next arrow
  • ಹೆಸರು ಬೇಳೆಯ ದೋಸೆ ಮಾಡಿ ಸವಿದು ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 1 ಕಪ್-ಹೆಸರು ಬೇಳೆ, 2 ಕಪ್ ನೀರು, ರುಬ್ಬಲು ನೀರು, ಕಾಲು ಟೀ ಸ್ಪೂನ್-ಅರಿಶಿನ, ಕಾಲು ಸ್ಪೂನ್ -ಖಾರದ ಪುಡಿ, ಕಾಲು ಟೀ ಸ್ಪೂನ್-ಜೀರಿಗೆ ಪುಡಿ, ಇಂಗು-ಚಿಟಿಕೆ, ಕಾಲು ಕಪ್ ಕೊತ್ತಂಬರಿಸೊಪ್ಪು, ಅರ್ಧ ಕಪ್- ಸಣ್ಣಗೆ ಹಚ್ಚಿದ ಈರುಳ್ಳಿ, 1 ಟೀ ಸ್ಪೂನ್-ಶುಂಠಿ ತುರಿ, 2-ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, 2 ಟೇಬಲ್ ಸ್ಪೂನ್ ಎಣ್ಣೆ,

    300x250 AD

    ಮಾಡುವ ವಿಧಾನ: ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಅರಿಶಿನ, ಖಾರದಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ ಉರಿ ಹಸಿಮೆಣಸು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಹಾಗೇಯೇ ಬಿಡಿ. ಈ ಹಿಟ್ಟು ತುಂಬಾ ದಪ್ಪಗಾಗಿದ್ದರೆ 3 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ, ನಂತರ ಗ್ಯಾಸ್ ಮೇಲೆ ತವಾ ಇಟ್ಟು ಎಣ್ಣೆ ಹಾಕಿ ಆಮೇಲೆ ಈ ದೋಸೆ ಹಿಟ್ಟನ್ನು ಹಾಕಿ ದೋಸೆ ಮಾಡಿದರೆ ರುಚಿಯಾದ ಹೆಸರು ಬೇಳೆ ದೋಸೆ ಸವಿಯಲು ಸಿದ್ಧ.

    Share This
    300x250 AD
    300x250 AD
    300x250 AD
    Back to top