Slide
Slide
Slide
previous arrow
next arrow

ಅಲ್ಪಸಂಖ್ಯಾತರು ರಾಷ್ಟ್ರದ ಮುಖ್ಯವಾಹಿನಿಗೆ ಬರಬರೇಕು; ಕಾಗೇರಿ

300x250 AD

ಶಿರಸಿ: ರಾಷ್ಟ್ರದ ಮುಖ್ಯವಾಹಿನಿಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಅಲ್ಪ ಸಂಖ್ಯಾತರು ಬರದಂತೆ ಮಾಡಿ ಬಿಜೆಪಿ, ಆರ್ಎಸ್ಎಸ್ ಮೇಲೆ ಗೂಬೆ ಕೂರಿಸಿ ಕಾಂಗ್ರೆಸ್ ಒಡೆದು ಆಳುತ್ತಿದೆ. ಅಲ್ಪಸಂಖ್ಯಾತ ಬಾಹುಳ್ಯವಿರುವ ಬೂತ್ ಗಳಲ್ಲಿ ಒಂದಂಕಿ ಮತ ಬಿದ್ದರೆ ಮುಂದೆ ಅದೇ ರೀತಿ ಮುಂಬರುವ ದಿನಗಳಲ್ಲಿ ಇದೇ ನಿರ್ಧಾರ ಕೈಕೊಂಡಲ್ಲಿ ವ್ಯವಸ್ಥೆ ಏನಾಗಬಹುದು. ಹಾಗಾಗಿ ಅಲ್ಪಸಂಖ್ಯಾತರು ರಾಷ್ಟ್ರ ದ ಮುಖ್ಯವಾಹಿನಿಗೆ ಬರಬೇಕು ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶಿರಸಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮೋದಿಜಿ ನೀಡುವ ರೇಷನ್, ವಾಕ್ಸಿನ್, ಆಯುಷ್ಮಾನ್ ಪ್ರಯೋಜನ ಎಲ್ಲವನ್ನು ಪಡೆದುಕೊಂಡು ಓಟ್ ಮಾತ್ರ ಬೇರೆಯವರಿಗೆ ಅಂದರೆ ಬಹುಸಂಖ್ಯಾತರು ಅದೇ ಯೋಚನೆ ಮಾಡಿದರೆ ಏನಾಗಬಹುದು ಎಂದರು.

ಮೋದಿಜಿ ಕಾರ್ಯಕ್ರಮದ ಕುರಿತು ಕಾರ್ಯಕರ್ತರು, ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಲು ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಬರುವಂತೆ ಆಹ್ವಾನ ನೀಡಬೇಕು. ಕಾರ್ಯಕರ್ತರು ಮೊದಲೇ ಆಗಮಿಸಿ ನಮ್ಮ ನಮ್ಮ ಭಾಗದಿಂದ ಬಂದ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಿಕೊಡಬೇಕು ಎಂದರು.

300x250 AD

ಈ ಸಭೆಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಂಡಲದ ಅಧ್ಯಕ್ಷರಾದ ಉಷಾ ಹೆಗಡೆ, ಆನಂದ್ ಸಾಲೆರ್, ಮಾಧ್ಯಮ ವಕ್ತಾರ ಸದಾನಂದ ಭಟ್, ರಮಾಕಾಂತ್ ಭಟ್, ಮಾಲತೇಶ್ ಹಾದಿಮನಿ, ನರಸಿಂಹ ಹೆಗಡೆ, ಮಂಜುನಾಥ್ ಬಂಡಾರಿ ಇದ್ದರು.

Share This
300x250 AD
300x250 AD
300x250 AD
Back to top