ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಸಿಟಿವಿಟಿ ಪ್ರಮಾಣದಲ್ಲಿ ಕೂಡ ಸ್ವಲ್ಪ ಏರಿಕೆಯಾಗಿದ್ದು, ಸೋಮವಾರ 0.87 ರಷ್ಟು ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅದರಂತೆ ಕಳೆದ ಎರಡು ದಿನದ ಅವಧಿಯಂತೆ ರವಿವಾರ ಶೇ.0.78 ಹಾಗೂ ಶನಿವಾರ 0.79 ರಷ್ಟು ಪಾಸಿಟಿವಿಟಿ ದಾಖಲಾಗಿದೆ.