Slide
Slide
Slide
previous arrow
next arrow

ಕೇಂದ್ರ-ರಾಜ್ಯ ಸರಕಾರದ ರೈತ ವಿರೋಧಿ ನೀತಿಗೆ ಖಂಡನೆ; ರಾಜ್ಯಾದ್ಯಂತ ಭೂಮಿ ಹಕ್ಕುದಾರರ ಸಾಂಘಿಕ ಹೋರಾಟಕ್ಕೆ ತೀರ್ಮಾನ

300x250 AD

ಶಿರಸಿ: ಸಾಂಘೀಕ ಮತ್ತು ಕಾನೂನಾತ್ಮಕ ಅಡಿಯಲ್ಲಿ ರಾಜ್ಯಾದ್ಯಂತ ಪ್ರಬಲ ಹೋರಾಟ ಮಾಡುವುದು, ಜನಜಾಗೃತಿ ಮತ್ತು ಜನಾಂದೋಲನ ಮಾಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿಗೆ ಖಂಡನೆ ನಿರ್ಣಯದೊಂದಿಗೆ ಅರಣ್ಯವಾಸಿಗಳ ರಕ್ಷಣೆಗೆ ಹೋರಾಟಗಾರರ ವೇದಿಕೆಯು ಬದ್ಧವಾಗಿರಲು ತೀರ್ಮಾನಿಸಲಾಯಿತು.


ಇಂದು ಸ್ಥಳೀಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದ ಆವರಣದಲ್ಲಿ ರಾಜ್ಯಾದ್ಯಂತ ಭಾಗವಹಿಸಿರುವ `30 ವರ್ಷ ಅರಣ್ಯ ಭೂಮಿ ಹಕ್ಕು ಹೋರಾಟ ಒಂದು ಅವಲೋಕನ’ ಕಾರ್ಯಕ್ರಮ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಿರ್ಣಯಿಸಲಾಯಿತು.


ಅರಣ್ಯವಾಸಿಗಳ ಸಾಮಾಜಿಕ ಜಾಗೃತೆ ಉಂಟು ಮಾಡುವಲ್ಲಿ ಜನಜಾಗೃತಿ ಕಾರ್ಯವನ್ನು ಗ್ರಾಮೀಣ ಮಟ್ಟದಲ್ಲಿ ಸಂಘಟಿಸಲು, ಅರಣ್ಯ ವಾಸಿಗಳ ಸಾಗುವಳಿ ಹಾಗೂ ಹಕ್ಕಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸುವುದು, ಇಗಾಗಲೇ ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯ ವಾಸಿಗಳ ಪರವಾಗಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಬಲ ವಾದವನ್ನ ಮಂಡಿಸುವುದು, ರಾಜ್ಯವ್ಯಾಪ್ತಿ ಜರುಗುತ್ತಿರುವ ಹೋರಾಟಕ್ಕೆ ಕಾಗೋಡ ತಿಮ್ಮಪ್ಪರ ನೇತ್ರತ್ವದಲ್ಲಿ ಹೋರಾಟ ಮುಂದುವರಿಸುವುದು ಮುಂತಾದ ತೀರ್ಮಾನಗಳನ್ನ ಸಭೆಯಲ್ಲಿ ನಿರ್ಣಯಿಸಲಾಯಿತು.


ಹೋರಾಟದ ಇಚ್ಛಾಶಕ್ತಿ ಮೈಗೂಡಿಸಿಕೊಳ್ಳಿ:
ರಾಜ್ಯದಲ್ಲಿ ಮಾದರಿ ರೀತಿಯಲ್ಲಿ ನಿರಂತರ 30 ವರ್ಷದ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಹೋರಾಟ ರಾಜ್ಯಕ್ಕೆ ಮಾದರಿ. ಅರಣ್ಯ ವಾಸಿಗಳ ಹಕ್ಕು ಪ್ರಾಪ್ತ ಆಗುವ ದಿಶೆಯಲ್ಲಿ ಹೋರಾಟ ಅನಿವಾರ್ಯ ಭೂಮಿ ಹಕ್ಕು ಹೋರಾಟದ ಭಾಗ. ಹೋರಾಟದ ಛಲವಿದ್ದಲ್ಲಿ ಮಾತ್ರ ಭೂಮಿ ಹಕ್ಕು ದೊರಕಲು ಸಾಧ್ಯ. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿ ಪರವಾಗಿದ್ದರೂ ಆಡಳಿತಾತ್ಮಕ ತೊಂದರೆಯಿಂದ ಇಚ್ಛಾಶಕ್ತಿ ಕೊರತೆ ಉಂಟಾಗಿ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆಂದು ಕಾಗೋಡ ತಿಮ್ಮಪ್ಪ ಅವರು ಹೇಳಿದರು.

ರವೀಂದ್ರ ನಾಯ್ಕ ಸಂಘಟನೆಗೆ ಪ್ರಶಂಸೆ:
ನಿರಂತರ 30 ವರ್ಷ ಅರಣ್ಯವಾಸಿಗಳ ಪರವಾಗಿ ತೊಡಗಿಸಿಕೊಂಡು ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳಲ್ಲಿಯೂ ಪ್ರಕರಣ ದಾಖಲಿಸಿ ಜೀವನದ ಮಹತ್ವ ಘಟ್ಟವನ್ನು ಅರಣ್ಯವಾಸಿಗಳ ಪರವಾಗಿ ಧ್ವನಿ ಎತ್ತಿರುವ ರವೀಂದ್ರ ನಾಯ್ಕ ಅವರ ಸಂಘಟನೆ ಕುರಿತು ರಾಜ್ಯಾದ್ಯಂತ ಆಗಮಿಸಿರುವ ಧುರೀಣರು ಪ್ರಶಂಸಿಸಿದರು.

300x250 AD


ಹೋರಾಟಗಾರರ ವೇದಿಕೆ 30 ವರ್ಷದಲ್ಲಿ ಹಮ್ಮಿಕೊಂಡ 6 ಪಾದಯಾತ್ರೆಗಳಲ್ಲಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದ ದ್ಯಾವ ಗೌಡ ಹುಕ್ಕಳಿ ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ರಮೇಶ ಹೆಗಡೆ, ತಿ.ನ.ಶ್ರೀನಿವಾಸ ಸಾಗರ, ಪ್ರಜಾಶಕ್ತಿ ಬೋರಯ್ಯ ಚಿತ್ರದುರ್ಗ, ಕೆ ರಾಮು ಕೊಡಗು, ಶಂಕರ ವಾಲ್ಮೀಕಿ ಗದಗ, ಚಿಕ್ಕಣ್ಣ ಚಾಮರಾಜನಗರ, ಕುಬೇರಪ್ಪ ಹಾವೇರಿ, ಕಂಸ ಬಾಬು ಸಿದ್ಧಿ ಧಾರವಾಡ, ಪಂಪಾವತಿ ಬಳ್ಳಾರಿ, ರಮಾನಂದ ನಾಯಕ ಅಚಿವೆ, ಮಂಜುನಾಥ ಮರಾಠಿ, ರಾಮ ಮರಾಠಿ, ದೇವರಾಜ ಗೊಂಡ, ಪಾಂಡು ನಾಯ್ಕ, ರಿಜವಾನ್ ಶೇಖ್, ಸೀತಾರಾಮ ಗೌಡ ನಿರಗಾನ್, ದ್ಯಾವಾ ಗೌಡ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಕೃಷ್ಣ ಗಾವಡಾ, ಲಕ್ಷ್ಮಣ ಮಾಳ್ಳಕ್ಕನವರ, ಇಬ್ರಾಹಿಂ ನಬೀ ಸಾಬ, ರಾಜು ನರೇಬೈಲ್, ತಿಮ್ಮ ಮರಾಠಿ ಮುಂತಾದವರು ಉಪಸ್ಥಿತರಿದ್ದರು.

`ಅರಣ್ಯವಾಸಿಗಳ ಅರಣ್ಯ ರೋದನಕ್ಕೆ ಕಾನೂನು ಪರಿಹಾರ. ವಸತಿ ಇಲಾಖೆಯೂ ಅರಣ್ಯ ಕ್ಷೇತ್ರದಲ್ಲಿ ಆರ್ಥಿಕ ನೆರವು ನೀಡುವ ಆದೇಶ ಕಾನೂನಿನಲ್ಲಿ ಮಾನ್ಯತೆ ಇಲ್ಲ.’- ರಮೇಶ ಹೆಗಡೆ, ಶಿವಮೋಗ್ಗ

`ಚುನಾವಣೆಗೆ ಮಂಜೂರಿ ಮಾಡುತ್ತೇವೆ ಎಂಬ ರಾಜಕಾರಣಿಗಳು ಅರಣ್ಯ ಭೂಮಿ ಒಕ್ಕಲೆಬ್ಬಿಸುವಾಗ, ಕೋರ್ಟನಲ್ಲಿ ಒಕ್ಕಲೆಬ್ಬಿಸಲು ಆದೇಶವಾದಾಗ ಮಾಯವಾಗುವುದು ವಿಷಾದಕರ. ವಿರೋಧ ಪಕ್ಷದಲ್ಲಿ ಇದ್ದಾಗ ಕಾನೂನು ತಿದ್ದುಪಡಿ ಆಗಬೇಕೆಂದು ಹೇಳುವ ಸಭಾ ಅಧ್ಯಕ್ಷ ಕಾಗೇರಿಯವರು ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರ ಇದ್ದಾಗ ದ್ವಂದ್ವನೀತಿ ಅನುಸರಿಸುವುದು ವಿಷಾದಕರ. – ತಿ.ನ.ಶ್ರೀನಿವಾಸ, ಸಾಗರ

`ಭೂಮಿ ಹಕ್ಕಿಗೆ ಹೋರಾಟ ಅನಿವಾರ್ಯ, ಕಾನೂನು ಪರ ಸರಕಾರ ಚಿಂತಿಸದೇ ಇರುವುದು ಖೇದಕರ. – ಪ್ರಜಾಶಕ್ತಿ ಬೋರಯ್ಯ, ಚಿತ್ರದುರ್ಗ

Share This
300x250 AD
300x250 AD
300x250 AD
Back to top