• Slide
    Slide
    Slide
    previous arrow
    next arrow
  • 50ಕ್ಕೂ ಹೆಚ್ಚು ಗಿಡ ನೆಟ್ಟು ಮಗಳ ಜನ್ಮದಿನ ಆಚರಣೆ

    300x250 AD

    ಯಲ್ಲಾಪುರ: ಪಾಲಕರು ಮಕ್ಕಳ ಹುಟ್ಟುಹಬ್ಬವನ್ನು ಊರವರನ್ನು, ಸಂಬಂಧಿಕರನ್ನು ಕರೆದು ಸಂಭ್ರಮದಿಂದ ಮಾಡುವುದು ಸಾಮಾನ್ಯ. ಆದರೆ ತಾಲೂಕಿನ ಹುಣಶೆಟ್ಟಿಕೊಪ್ಪದ ರೇಣುಕಾ ಹಾಗೂ ಚಂದು ಮಡಾಕರ್ ದಂಪತಿ ತಮ್ಮ ಮಗಳ ಪ್ರಥಮ ಜನ್ಮದಿನವನ್ನು 50 ಕ್ಕೂ ಹೆಚ್ಚು ಗಿಡ ನೆಡುವ ಮೂಲಕ ಆಚರಿಸಿ ಮಾದರಿಯಾಗಿದ್ದಾರೆ.


    ರೇಣುಕಾ ಹಾಗೂ ಚಂದು ದಂಪತಿಯ ಪುತ್ರಿ ತಸ್ಮಯಿಯ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಹಲಸು, ಮಾವು, ಬಾದಾಮಿ, ನೇರಳೆ, ನೆಲ್ಲಿ, ಆಲ, ಅತ್ತಿ ಸೇರಿದಂತೆ ವಿವಿಧ ಜಾತಿಯ 50 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.

    300x250 AD


    ಈ ವೇಳೆ ಗ್ರಾ.ಪಂ ಉಪಾಧ್ಯಕ್ಷ ಪ್ರಕಾಶ ಶಾಪುರಕರ್, ನಾಗರಾಜ ನಾಯ್ಕ, ಕಿರಣ ಮರಾಠಿ ಇತರರು ಸಾಥ್ ನೀಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top