Slide
Slide
Slide
previous arrow
next arrow

ತವರಿನಲ್ಲೇ ‘ಇಂಗ್ಲೆಂಡ್’ ಗೆ 151 ರನ್ ಗಳ ‘ಸೋಲುಣಿಸಿದ ಭಾರತ’

300x250 AD

ಲಂಡನ್:ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಲಂಡನ್ನಿನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು‌. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಗಳನ್ನು ಭಾರತ ಗಳಿಸಿತ್ತು ಹಾಗೂ ಇಂಗ್ಲೆಂಡ್ 391 ರನ್ ಗಳಿಸಿತ್ತು.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 298 ರನ್ ಗಳಿಗೆ ಡಿಕ್ಲೆರ್ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 120 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು‌. ಆ ಮೂಲಕ ಭಾರತ ಸರಣಿಯಲ್ಲಿ 1-0 ಜಯ ಗಳಿಸಿತು.

ಮೊದಲ್ ಇನ್ನಿಂಗ್ಸ್ ನಲ್ಲಿ ಭಾರತದ ಕೆ ಎಲ್ ರಾಹುಲ್ 129 ರನ್ ಹಾಗೂ ರೋಹಿತ್ ಶರ್ಮಾ 83 ರನ್ ಗಳಿಸಿ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಬೌಲಿಂಗ್ ನಲ್ಲಿ ಇಶಾಂತ್ ಶರ್ಮಾ 3 ವಿಕೆಟ್ ಮೊಹಮದ್ ಸಿರಾಜ್ 4 ವಿಕೆಟ್ ಪಡೆದು ಮಿಂಚಿದ್ದರು.

300x250 AD

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಅಜಿಂಕ್ಯ ರಹಾನೆ 61 ಗಳಿಸಿದರೆ ಉಳಿದ ಸ್ಟಾರ್ ಬ್ಯಾಟ್ಸ್ ಮನ್ ಗಳು ಕಡಿಮೆ ರನ್ ಗಳಿಸಿ ವಿಕೆಟ್ ಒಪ್ಪಿಸಿದರು‌. ಆದರೆ ಭಾರತದ ಬೌಲರ್ ಗಳಾದ ಮೊಹಮದ್ ಶಮಿ 56 ಹಾಗೂ ಜಸ್ಪ್ರೀತ್ ಭೂಮ್ರಾ 34 ರನ್ ಸಿಡಿಸಿ 89 ರನ್ ಗಳ ಮೊತ್ತ ಕಲೆ ಹಾಕಿ ಅಮೋಘ ಪ್ರದರ್ಶನ ನೀಡಿದರು.

ಹಾಗೂ ಬೌಲಿಂಗ್ ನಲ್ಲಿಯೂ ಕೂಡ ಭೂಮ್ರಾ 3 ವಿಕೆಟ್ ಇಶಾಂತ್ ಶರ್ಮಾ 2 ವಿಕೆಟ್ , ಮೊಹಮದ್ ಶಮಿ 1ವಿಕೆಟ್ ಪಡೆದರೆ ಮೊಹಮದ್ ಸಿರಾಜ್ 4 ವಿಕೆಟ್ ಪಡೆದು ಇಂಗ್ಲೆಂಡನ್ನು ಆಲ್ ಔಟ್ ಗೊಳಿಸುವಲ್ಲಿ ಸಫಲರಾದರು.

ಇದೇ ಎರಡನೆ ಬಾರಿಗೆ ಸ್ಪಿನ್ನರ್ಸ್ ಗಳನ್ನು ಹೊರತು ಪಡಿಸಿ ಭಾರತೀಯ ಬೌಲರ್ ಗಳು ಹೆಚ್ಚು ವಿಕೆಟ್ ಪಡೆದಿರುವುದು ಪಂದ್ಯದ ವಿಶೇಷವಾಗಿದ್ದು ಮೊಹಮದ್ ಸಿರಾಜ್ ದಾಳಿಗೆ ಇಂಗ್ಲೆಂಡ್ ತಂಡ ಕೇವಲ 120 ರನ್ ಗಳಿಗೆ ನೆಲಕಚ್ಚಿತು.

Share This
300x250 AD
300x250 AD
300x250 AD
Back to top