• Slide
    Slide
    Slide
    previous arrow
    next arrow
  • ಸುವಿಚಾರ

    300x250 AD


    ಮೌನಂ ಕಾಲವಿಲಂಬಶ್ಚ ಪ್ರಯಾಣಂ ಭೂಮಿದರ್ಶನಮ್
    ಭೃಕುಟ್ಯನ್ಯಮುಖೀವಾರ್ತಾ ನಕಾರಃ ಷಡ್ವಿಧಃ ಸ್ಮೃತಃ ||

    ಸಂಸ್ಕೃತವ್ಯಾಕರಣದಲ್ಲಿ ನಞ್ ಎಂಬ ನಿಷೇಧಾರ್ಥಕ ಶಬ್ದಕ್ಕೆ ಆರು ವಿಧದ ಅರ್ಥಗಳನ್ನು ಹೇಳಲಾಗಿದೆ. ಸಾದೃಶ್ಯ, ಅಭಾವ, ಅನ್ಯತಾ, ಅಲ್ಪತಾ, ಅಪ್ರಾಶಸ್ತ್ಯ ಮತ್ತು ವಿರೋಧ ಎಂಬವುಗಳೇ ಆ ಆರು ಅರ್ಥಗಳು. ಅದರ ಹೊರತಾಗಿ ಈ ಸುಭಾಷಿತದಲ್ಲಿ ದಾರ್ಶನಿಕನು ಇನ್ನೂ ಬೇರೆ ಆರು ಅರ್ಥಗಳನ್ನು ನಕಾರಕ್ಕೆ (ನ ಎಂಬ ಪದ) ಹೇಳಹೊರಟಿದ್ದಾನೆ. ಈತನು ಹೇಳುವ ಅರ್ಥಗಳು ’ಒಪ್ಪಿಗೆಯಿಲ್ಲದ್ದನ್ನು ತಿಳಿಸುವ ರೀತಿ’ ಎನ್ನುವ ದೃಷ್ಟಿಯಲ್ಲಿ ನೋಡಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಸುಮ್ಮನಿದ್ದುಬಿಡುವುದು, ಪ್ರತಿಕ್ರಿಯೆ ಕೊಡಲು ತಡಮಾಡುವುದು, ದೂರಸರಿಯುವುದು, ನೆಲ ನೋಡುತ್ತ ನಿಲ್ಲುವುದು, ಹುಬ್ಬು ಗಂಟಿಕ್ಕುವುದು, ಇನ್ನೆಲ್ಲೋ ನೋಡುತ್ತ ಮಾತಾಡುವುದು
    ಇವೇ ಅ ಆರುಬಗೆಯ ಅಸಮ್ಮತಿಯ ಲಕ್ಷಣಗಳು.
    ಶ್ರೀ ನವೀನ ಗಂಗೋತ್ರಿ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top