ಯಾವಂತಃ ಕುರುತೇ ಜಂತುಃ ಸಂಬಂಧಾನ್ಮನಸಃ ಪ್ರಿಯಾನ್
ತಾವಂತೋಸ್ಯ ನಿಖನ್ಯಂತೇ ಹೃದಯೇ ಶೋಕಶಂಕವಃ ||
ಮಾನವ ಜೀವಿಯು ತನ್ನ ಬದುಕಿನಲ್ಲಿ ಎಷ್ಟೆಲ್ಲ ಸಂಬಂಧಗಳನ್ನು ಮನಸಿಗೆ ಪ್ರಿಯವಾದುದೆಂದು ಆಲಂಗಿಸುತ್ತ, ಅಪ್ಪಿಕೊಳ್ಳುತ್ತ, ಕಟ್ಟಿಕೊಳ್ಳುತ್ತ ಹೋಗುವನೋ ಅಷ್ಟಷ್ಟು ಅವನ ಹೃದಕ್ಕೆ ನೋವಿನ ಶಲಾಕೆಗಳ ತಿವಿತವುಂಟಾಗುತ್ತದೆ. ಅಂದರೆ, ಮನಸಿಗೆ ಪ್ರಿಯವೆಂದು ಕಟ್ಟಿಕೊಂಡ ಎಲ್ಲ ಬಗೆಯ ಸಂಬಂಧಗಳಿಂದಲೂ ಒಂದಲ್ಲ ಒಂದು ದಿನ ನೋವುಣ್ಣುವುದು ಇದ್ದೇ ಇರುತ್ತದೆ. ಇದು ನಮ್ಮಲ್ಲನೇಕರ ಅನುಭವವೂ ಹೌದು. ಸಂಬಂಧವೆಂದರೇನೆ ಬಂಧನ. ಬಂಧನವು ನೋವು ಕೊಡದೆ ಆನಂದವನ್ನೇನು ಕೊಟ್ಟೀತು?
ಶ್ರೀ ನವೀನ ಗಂಗೋತ್ರಿ
ಸುವಿಚಾರ
