ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಅಕ್ಕಿ-1 ಕಪ್, ತೆಂಗಿನಕಾಯಿ -1, ಬೆಲ್ಲ -2 ಕಪ್, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ, ನಂತರ 1 ತೆಂಗಿನಕಾಯಿಯನ್ನು ತುರಿದು ರುಬ್ಬಿಕೊಂಡು ಕಾಯಿಹಾಲು ತೆಗೆಯಿರಿ. ಅನ್ನ ಸರಿಯಾಗಿ ಬೆಂದ ಮೇಲೆ ಇನ್ನೊಂದು ಪಾತ್ರೆಗೆ ಅನ್ನವನ್ನು ಹಾಕಿ. ಇದಕ್ಕೆ ಕಾಯಿಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಸ್ಟವ್ ಮೇಲಿಟ್ಟು ಕುದಿಸಿ. ಸ್ವಲ್ಪ ಕುದಿ ಬಂದಾಗ 2 ಕಪ್ ನಷ್ಟು ತುರಿದ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿದರೆ ಸವಿಯಲು ರುಚಿಯಾದ ಅಕ್ಕಿ ಪಾಯಸ ರೆಡಿ.