Slide
Slide
Slide
previous arrow
next arrow

ಇಸ್ರೋದಿಂದ ನಭಕ್ಕೆ ಚಿಮ್ಮಿದ ಭೌಗೋಳಿಕ ಇಮೇಜಿಂಗ್ ಉಪಗ್ರಹ

300x250 AD

ನವದೆಹಲಿ: ಇಂದು ಬೆಳಿಗ್ಗೆ 5:43ಕ್ಕೆ ಇಸ್ರೋ ಕಛೇರಿಯಾದ ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ ಮತ್ತೊಂದು ಉಪಗ್ರಹ ಉಡಾವಣೆಯಾಗಿದೆ.


ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‍ನ ಅಮೆಜೋನಿಯಾ-1 ಉಪಗ್ರಹ ಹಾಗೂ ಇನ್ನು ಕೆಲವು ದೇಸೀ ಉಪಗ್ರಹಗಳನ್ನು ಹೊಂದಿದ್ದು, ಇಂದು ಇದರ ಉಡಾವಣೆಯಾಗಿದೆ. ಇದು ಪ್ರಕೃತಿ ವಿಕೋಪಗಳು,ಮೋಡ ಸ್ಫೋಟಗಳು ಅಥವಾ ಗುಡುಗು ಸಹಿತ ಹವಾಮಾನ ವರದಿಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

300x250 AD


ಜಿಎಸ್‍ಎಲ್‍ವಿ-ಎಫ್ 10 ಮಿಷನ್ ಭೌಗೋಳಿಕ ಇಮೇಜಿಂಗ್ ಉಪಗ್ರಹ ಜಿಐಸ್ಯಾಟ್-1ನ್ನು ನಭಕ್ಕೆ ಹೊತ್ತೊಯ್ದಿದೆ. ಇದು ಭೂಮಿಯ ಕಕ್ಷೆಯನ್ನ ಸೇರಿದ ನಂತರ ಈ ರಾಕೆಟ್? ಭಾರತದ ಐ ಇನ್ ದ ಸ್ಕೈ ((I In The Sky)ಆಗಿ ಕಾರ್ಯನಿರ್ವಹಿಸಲಿದೆ.

ತಾಂತ್ರಿಕ ದೋಷ: ನಿಗದಿಯಂತೆ ನಭಕ್ಕೆ ಹಾರಿದ ಉಪಗ್ರಹದ ಪ್ರಥಮ ಮತ್ತು ದ್ವಿತೀಯ ಹಂತ ಯಶಸ್ವಿಯಾಗಿದ್ದು, ಕ್ರಯೋಜಿನಿಕ ಮೇಲಿನ ಹಂತದ ದಹನ ಕ್ರಿಯೆ ತಾಂತ್ರಿ ಕಾರಣಗಳಿಂದ ಸಂಭವಿಸಿಲ್ಲ. ಆದ್ದರಿಂದ ಉದ್ದೇಶಿತ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

Share This
300x250 AD
300x250 AD
300x250 AD
Back to top