• first
    second
    third
    previous arrow
    next arrow
  • ರುಚಿಯಾದ ಇಡ್ಲಿ ಪಕೋಡ ಮಾಡಿ ಸವಿದು ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಇಡ್ಲಿ 4, ಕಡಲೆಹಿಟ್ಟು 1 ಕಪ್, ಅಕ್ಕಿಹಿಟ್ಟು 1/2 ಕಪ್, ಕತ್ತರಿಸಿದ ಈರುಳ್ಳಿ 1 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಹೆಚ್ಚಿದ ಪುದೀನಾ ಸೊಪ್ಪು ಸ್ವಲ್ಪ, ಅಚ್ಚ ಖಾರದ ಪುಡಿ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಜೀರಿಗೆ 2 ಚಮಚ, ಅಡುಗೆ ಸೋಡಾ 1/4 ಚಮಚ

    300x250 AD


    ಮಾಡುವ ವಿಧಾನ: ಎಣ್ಣೆ ಕರಿಯಲು. ಮೊದಲು ಇಡ್ಲಿಗಳನ್ನು ಪುಡಿಮಾಡಿ ಕಡಲೆಹಿಟ್ಟು ಹಾಗೂ ಅಕ್ಕಿ ಹಿಟ್ಟನ್ನು ಸೇರಿಸಿ. ಈ ಮಿಶ್ರಣಕ್ಕೆ ಈರುಳ್ಳಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಕೊಬ್ಬರಿ ತುಂಡು, ಅಚ್ಚ ಖಾರದಪುಡಿ, ಉಪ್ಪು, ಅಡುಗೆ ಸೋಡಾ ಸೇರಿಸಿ. ಸ್ವಲ್ಪ ನೀರು ಹಾಕಿ ಪಕೋಡ ಹದಕ್ಕೆ ಸ್ವಲ್ಪ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣದಿಂದ ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಪಕೋಡ ಆಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು. ಈಗ ಬಿಸಿಬಿಸಿ ಇಡ್ಲಿ ಪಕೋಡ ಸವಿಯಲು ಸಿದ್ಧ. ಇದನ್ನು ಕಾಯಿ ಚಟ್ಟಿಯೊಂದಿಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top