Slide
Slide
Slide
previous arrow
next arrow

ನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75

300x250 AD

ಸ್ವರಾಜ್ಯ @ 75: ಬಳ್ಳಾರಿ ಜಿಲ್ಲೆಯ ಆದೋನಿ ತಾಲೂಕಿನ ತರಣಿಕಲ್ಲು ಗ್ರಾಮದ ಪಟೇಲನನ್ನು ಆಂಗ್ಲ ಸರ್ಕಾರವು ‘ಹಣ ಅಪಹರಿಸಿದ್ದಾನೆಂದು’ ಸುಳ್ಳು ಆರೋಪ ಹೊರಿಸಿ ಶಿಕ್ಷಿಸಿತು. ಈ ಅನ್ಯಾಯವನ್ನು ನೋಡಿ ಅಲ್ಲಿನ ಜನರು ಬ್ರಿಟಿಷರ ವಿರುದ್ಧ ಬಂಡಾಯವೆದ್ದರು. ಕ್ಯಾಂಪಬೆಲ್ ನೇತೃತ್ವದಲ್ಲಿ ಈ ಬಂಡಾಯವನ್ನು ಅಡಗಿಸಲಾಯಿತು.

ಬಳ್ಳಾರಿ ಜಿಲ್ಲೆಯ ರಾಯದುರ್ಗ ತಾಲೂಕಿನ ಪಾಳೆಯಗಾರ ರಾಜಗೋಪಾಲನಾಯಕನು ಸ್ವತಂತ್ರನಾಗಿದ್ದುಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರ ಜೊತೆಗೆ ಬ್ರಿಟಿಷರ ವಿರುದ್ಧ
ಹೋರಾಡಿದ. ಬ್ರಿಟಿಷರು ಇವನನ್ನು ಸೋಲಿಸಿದರು.

1801ರಲ್ಲಿ ಅಂದಿನ ಬಳ್ಳಾರಿ ಜಿಲ್ಲೆಯ ಆದರೆ ಇಂದಿನ ಕರ್ನೂಲ್ ಜಿಲ್ಲೆಯ ಆದವಾನಿ ತಾಲೂಕಿನ ಪೆದ್ದತುಂಬಳಂ ಮಂಡಲದ ತೆರ್ನೇಕಲ್ ಗ್ರಾಮವಾಸಿಗಳು ಮತ್ತು ಮುತ್ಕೂರು ಗೌಡಪ್ಪನವರು ಹಾಗೂ ಸುತ್ತಮುತ್ತಲಿನ ಪ್ರದೇಶದವರು ಬ್ರಿಟಿಷರ ಕಂದಾಯ ವಸೂಲಿ, ಸುಲಿಗೆ, ಅತ್ಯಾಚಾರಗಳ ವಿರುದ್ಧ ಐತಿಹಾಸಿಕ ಹೋರಾಟ ನಡೆಯಿತು. ಆದವಾನಿ, ಬಳ್ಳಾರಿ ಮತ್ತು ಗುತ್ತಿ ಭಾಗದಲ್ಲಿನ ಬ್ರಿಟಿಷ್ ಸೈನ್ಯವನ್ನು ಕರೆಯಿಸಿ, ಈ ಹೋರಾಟವನ್ನು ಹತ್ತಿಕ್ಕಲಾಯಿತು. ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಅರ್ಧ ಶತಮಾನಕ್ಕೂ ಮೊದಲೇ ಬಳ್ಳಾರಿಯ ಭಾಗದಲ್ಲಿ ಮಹತ್ವದ ಹೋರಾಟ ನಡೆದಿದೆ.

300x250 AD

1806ರಲ್ಲಿ ನಡೆದ ಪ್ರಸಿದ್ಧ ‘ವೆಲ್ಲೂರು ಬಂಡಾಯ’ ದ ನೇತೃತ್ವ ನಡೆಸಿದವರೂ ಕರ್ನಾಟಕದವರೇ. ಈ ಸಂಘರ್ಷ ನಡೆದಿದ್ದು ಬ್ರಿಟಿಷರ ಕ್ರೈಸ್ತೀಕರಣದ ವಿರುದ್ಧ ಎಂದು ಥಾಮಸ್ ಮನ್ರೋ ಟಿಪ್ಪಣಿ ಮಾಡಿದ್ದಾನೆ.

– ಸಂಗ್ರಹ

Share This
300x250 AD
300x250 AD
300x250 AD
Back to top