
ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಬುಧವಾರ ಮುಂಜಾನೆ ನಡೆದ ಜಾವೆಲಿನ್ ಥ್ರೋ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಗ್ರೂಪ್ ಎ ಯಲ್ಲಿ ಸ್ಪರ್ಧಿಸಿದ ನೀರಜ್ ಮೊದಲ ಪ್ರಯತ್ನದಲ್ಲೇ 86.65 ಮೀಟರ್ ದೂರದ ಸಾಧನೆ ಮಾಡಿದರು. ಈ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಜರ್ಮನಿಯ ಜೊಹಾನ್ಸ್ ವೆಟರ್ 82.04 ಮೀಟರ್ ಸಾಧನೆ ಮಾಡಿದರು. ಆದರೆ, ನೀರಜ್ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಫೈನಲ್ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.