ಸಿದ್ದಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಸಿದ್ದಾಪುರ ತಾಲೂಕು ಶೇ.97.61ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಾಲೂಕಿನ 33 ಪ್ರೌಢಶಾಲೆಗಳಲ್ಲಿ 20 ಪ್ರೌಢಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದು ಸಾಧನೆ ಮಾಡಿದೆ ಎಂದು ಬಿಇಒ ಎಂ.ಎಚ್.ನಾಯ್ಕ ತಿಳಿಸಿದರು.
ಅವರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನೂರಕ್ಕೆ ನೂರು ಫಲಿತಾಂಶ ಪಡೆದ ಪ್ರೌಢಶಾಲೆ: ಸಿದ್ಧಿವಿನಾಯಕ ಬಾಲಕರ ಪ್ರೌಢಶಾಲೆ ಸಿದ್ದಾಪುರ,ಜಗದಂಬಾ ಪ್ರೌಢಶಾಲೆ ಸರಕುಳಿ,ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ,ಅಶೋಕ ಪ್ರೌಢಶಾಲೆ ಹಾರ್ಸಿಕಟ್ಟಾ, ಜನತಾ ವಿದ್ಯಾಲಯ ಬೇಡ್ಕಣಿ,ಸೀತಾರಾಮಚಂದ್ರ ಪ್ರೌಢಶಾಲೆ ಬಿಳಗಿ,ಎಂಜಿವಿವಿ ಪ್ರೌಢಶಾಲೆ ದೊಡ್ಮನೆ,ಎಂಜಿಸಿಎಂ ಪ್ರೌಢಶಾಲೆ ಬಿದ್ರಕಾನ, ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿ, ಸರ್ಕಾರಿ ಪ್ರೌಢಶಾಲೆ ಶಿರಗುಣಿ, ಸರ್ಕಾರಿ ಪ್ರೌಢಶಾಲೆ ಮನಮನೆ, ಸರ್ಕಾರಿ ಉರ್ದು ಪ್ರೌಢಶಾಲೆ ಸಿದ್ದಾಪುರ, ಸರ್ಕಾರಿ ಪ್ರೌಢಶಾಲೆ ಜಿಡ್ಡಿ, ಲಿಟ್ಲ ಪ್ಲವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ, ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ, ಸರ್ಕಾರಿ ಪ್ರೌಢಶಾಲೆ ಶಿರಳಗಿ, ಕಾಳಿಕಾ ಭವಾನಿ ಆಂಗ್ಲ ಮಾಧಮ ಪ್ರೌಢಶಾಲೆ ಕಾನಸೂರು, ಕರ್ನಾಟಕ ಪಬ್ಲಿಕ್ ಶಾಲೆ ಹಲಗೇರಿ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹಾರ್ಸಿಕಟ್ಟಾ, ಕಿತ್ತೂರ ರಣಿ ಚೆನ್ನಮ್ಮ ವಸತಿ ಶಾಲೆ ಕವಂಚೂರು ಇವುಗಳು ನೂರಕ್ಕೆ ನೂರು ಫಲಿತಾಂಶ ಪಡೆದುಕೊಂಡಿದೆ.
ಸರ್ಕಾರಿ ಪ್ರೌಢಶಾಲೆ ಕಾನಗೋಡ ಶೇ.97.96, ಎಸ್‌ಆರ್‌ಜಿಎಚ್‌ಎಂ ಪ್ರೌಢಶಾಲೆ ಸಿದ್ದಾಪುರ ಶೇ.97.83, ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ ಶೇ.97.67, ಸರ್ಕಾರಿ ಪ್ರೌಢಶಾಲೆ ಲಂಬಾಪುರ ಶೇ.97.37, ಆರ್.ವಿ.ಪ್ರೌಢಶಾಲೆ ಇಟಗಿ ಶೇ.96.77, ವಂದಾನೆ ಪ್ರೌಢಶಾಲೆ 96.67, ಹಳ್ಳಿಬೈಲ್ ಪ್ರೌಢಶಾಲೆ ಶೇ.96.43, ಕೋಲಸಿರ್ಸಿ ಪ್ರೌಢಶಾಲೆ ಶೇ.96.43, ನಾಣಿಕಟ್ಟಾ ಪ್ರೌಢಶಾಲೆ ಶೇ.94.12, ಹಾಳದಕಟ್ಟಾ ಪ್ರೌಢಶಾಲೆ ಶೇ.93.90, ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲೆ ಶೇ.91.84, ಬಂಕೇಶ್ವರ ಪ್ರೌಢಶಾಲೆ ಹೊಸೂರು ಶೇ.85.71, ಮಲೆನಾಡು ಪ್ರೌಢಶಾಲೆ ಕವಂಚೂರು ಶೇ.85.29 ಅಂಕ ಪಡೆದುಕೊಂಡಿದೆ.
ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು: ಕವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವರ್ಷಾ ಮಡ್ಲೂರು ಹಾಗೂ ಸಿದ್ದಾಪುರದ ಲಿಟ್ಲಫ್ಲವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಾಗಶ್ರೀ ಆರ್ ಇವರಿಬ್ಬರು 625ಕ್ಕೆ 621 ಅಂಕಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದಿಶಾ ಶಾನಭಾಗ 618 ಅಂಕಪಡೆದು ದ್ವಿತೀಯ, ನಾಣಿಕಟ್ಟಾ ಸರ್ಕಾರಿ ಪ್ರೌಢಶಾಲೆಯ ಎನ್ .ಎಸ್.ಸಾಧನಾ 617 ಅಂಕಪಡೆದು ಮೂರನೇ ಸ್ಥಾನ ಹಾಗೂ ಬಿದ್ರಕಾನ ಎಂಜಿಸಿಎಂ ಪ್ರೌಢಶಾಲೆಯ ಸಿಂಚನಾ ಎಂ.ಹೆಗಡೆ 616ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದರು. ಈ ವೇಳೆ ಚೈತನ್ಯ ಕುಮಾರ್, ಎಂ.ಬಿ.ನಾಯ್ಕ, ಮಹೇಶ ಹೆಗಡೆ ಇದ್ದರು.