
ಬೆಂಗಳೂರು: ದೇಶದಲ್ಲಿಯೇ ಅತೀ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ನವದೆಹಲಿಯ ಭಾರತೀಯ ವನ್ಯಜೀವಿ ಸಂಸ್ಥೆಯ ವರದಿಯ ಪ್ರಕಾರ ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 3,421 ಚಿರತೆಗಳಿವೆ. ಕರ್ನಾಟಕದಲ್ಲಿ 1783 ಚಿರತೆಗಳಿದ್ದು ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 1690 ಚಿರತೆಗಳಿದ್ದು ಮೂರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದ ದಾಂಡೇಲಿ ಮತ್ತು ಅಣಶಿ ಹುಲಿ ಪ್ರದೇಶಗಳಲ್ಲಿ 221 ಚಿರತೆಗಳಿವೆ.ಬಂಡೀಪುರ ಮತ್ತು ನಾಗರಹೊಳೆಗಳಲ್ಲಿಯೂ ಉತ್ತಮ ಪ್ರಮಾಣದಲ್ಲಿ ಚಿರತೆಗಳಿವೆ ಎಂದು ವರದಿ ತಿಳಿಸಿದೆ. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ಚಿರತೆಗಳಿರುವುದಾಗಿ ಈ ವರದಿ ಹೇಳಿದೆ.
ಕೃಪೆ:ನ್ಯೂಸ್13