
ಪ್ರಸ್ತುತ ಪ್ರಪಂಚದಲ್ಲಿ ಬದಲಾವಣೆ ಅಂದ್ರೆ ಟ್ರೇಂಡ್ಸ್ಗಳ ಜೊತೆಗೆ ಸಾಗುವುದು ಅನ್ನೋ ಮನೋಭಾವ ಎಲ್ಲರಲ್ಲೂ ಬೇರೂರಿದೆ. ಸಾಮಾಜಿಕ ಜಾಲತಾಣಗಳು ಸಾಕಷ್ಟು ಟ್ರೇಂಡ್‌ಗಳಿಗೆ ಉದಾಹರಣೆಯಾಗಿದ್ದು, ಮಾದ್ಯಮಗಳು ಇದಕ್ಕೆ ಪೂರಕವಾಗಿದೆ.
ಆಡಿಯೋ-ವೀಡಿಯೊ ಪ್ರಸರಣ ಮಾದ್ಯಮಗಳ ಜೊತೆಯಲ್ಲೇ ಆಡಿಯೋ ಮಾದ್ಯಮಯಲ್ಲಿ ಪಾಡಕಾಸ್ಟ ಅನ್ನುವ ಹೊಸ ಆಯಾಮ ಇಂದು ಜನನಿತವಾಗಿದೆ. ಇದಕ್ಕೆ ಪೂರಕ ಅನ್ನುವಂತೆ ಪ್ರಚಲಿತ ವಿದ್ಯಾಮಾನದಲ್ಲಿ ಕ್ಲಬ್‌ಹೌಸ್ ಆಪ್ ಸಾಕಷ್ಟು ಸುದ್ದಿಯಲ್ಲಿದೆ.
ವಿದ್ಯಾರ್ಥಿಗಳಿಂದ ಹಿಡಿದು, ಲೇಖಕರು, ಸಾಹಿತಿಗಳು, ಸಿನಿಮಾ ತಾರೆಯರು, ನಿರ್ದೇಶಕರು, ಬರಹಗಾರರು, ಸಂಗೀತಗಾರರು, ಪತ್ರಿಕೋದ್ಯಮದ ಹಿರಿಯರು, ಅನುಭವಿಗಳು, ಪ್ರಸ್ತುತ ಸಂಪಾದಕರು ಹಾಗೂ ವಿಷಯಾಸಕ್ತರು ಎಲ್ಲರನ್ನೂ ಒಂದೇ ಕಡೆಯಲ್ಲಿ ಕೇಳಸಿಗುವ ವೇದಿಕೆ ‘ಕ್ಲಬ್‌ಹೌಸ್’.
ಕ್ಲಬ್‌ಹೌಸ್ ೨೦೨೦ ರಲ್ಲೆ ರಚನೆಯಾಗಿ ಬೇರೆ ಎಲ್ಲಕಡೆ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿತ್ತು. ಆಂಡ್ರ್ಯಾಯ್ಡ್ ಮೊಬೈಲ್‌ಗಳಿಗೆ ಈ ಅಪ್ಲಿಕೇಷನ್ ಬಿಟ್ಟನಂತರ ಕ್ಲಬ್‌ಹೌಸ್ ಜನಪ್ರಿಯವಾಯಿತು. ಅದರಲ್ಲೂ ಭಾರತದಲ್ಲಿ ಕೊರೊನಾ ಎರಡನೇ ಅಲೇ ಪ್ರಾರಂಭವಾದ ಮೇಲೆ ಮತ್ತೆ ಲಾಕ್‌ಡೌನ್ ಜಾರಿಯಾದ ಮೇಲೆ, ಲಾಕ್‌ಡೌನ್ ನಲ್ಲಿ ನಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಕ್ಲಬ್‌ಹೌಸ್ ಉತ್ತಮ ವೇದಿಕೆಯಾಗಿದೆ.
ಸಾಹಿತ್ಯದ ಕುರಿತ ಮಂಥನಗಳು, ಪುಸ್ತಕಗಳ ವಿರ್ಮಶೆ, ಸಂಗೀತದ ವಿವಿಧ ಮಜಲುಗಳು ಹಾಗೂ ಇಂಪಾದ ಗಾಯನ, ಮಹಾಭಾರತದ ಉಪಕತೆಗಳ ಸವಿಸ್ತಾರವಾದ ಮಾತು, ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆಗಳಿಂದ ಚಲನಚಿತ್ರದ ಆಯಾಮಗಳ ಕುರಿತ ವಿಸ್ತಾರವಾದ ಚರ್ಚೆ, ಯಕ್ಷಗಾನ ಹಾಗೂ ತಾಳಮದ್ದಲೆಗಳ ಸಮ್ಮೇಳನ, ಬದಾಗುತ್ತಿರುವ ಭಾರತೀಯ ಮನರಂಜನಾ ಕ್ಷೇತ್ರದ ಉದಯೋನ್ಮುಖ ಪ್ರತಿಭೆಗಳ ಜೊತೆಗಿನ ಚಿಟ್-ಚ್ಯಾಟ್, ನಮ್ಮ ನಾಡು ನುಡಿಯ ಪ್ರಾಮುಖ್ಯತೆ, ಪ್ರವಾಸ ಕಥನ, ವಿವಿಧ ಸಂಸ್ಕೃತಿಗಳ ವಿನಿಮಯ, ಪ್ರತಿಕೋದ್ಯಮದ ಹೊಸ ಬದಲಾವಣೆ ಹಾಗೂ ಭವಿಷ್ಯ, ರಾಜಕೀಯದ ಪಲ್ಲಟಗಳು. ಪ್ರತಿಯೊಂದು ಸಂಗತಿಗಳ ಮುಕ್ತ ಸಂವಾದಕ್ಕೆ ಸಾಕ್ಷಿ ಕ್ಲಬ್‌ಹೌಸ್.
ಹೊಸ ವಿಚಾರಗಳ ಅರ್ಥೈಸುವಿಕೆ, ಮಾದ್ಯಮಗಳ ಬದಲಾವಣೆ ಕುರಿತು ಅರಿಯುವುದು ಒಂದೆಡೆಯಾದರೆ, ನಮ್ಮ ಇಷ್ಟದ ಸಾಹಿತಿ, ಕಥೆಗಾರ, ನಟ-ನಟಿ, ನಿರ್ದೇಶಕ, ಮೋಟಿವೇಶನಲ್ ಪರ್ಸನ್, ಕೇಳುವ ಭಾಗ್ಯ ನಮ್ಮದು. ಕೇವಲ ಗಂಭೀರ ಚರ್ಚೆಗಳೊಂದೆ ಅಲ್ಲದೆ ನಮ್ಮ ಶಾಲಾ ಹಾಗೂ ಬಾಲ್ಯದ ಸ್ನೇಹಿತರೊಡೆನೆ ಒಂದು ಸಂತಸದ ಕ್ಷಣವನ್ನು ಇಲ್ಲಿ ಕಳೆಯಬಹುದು.
ಕ್ಲಬ್‌ಹೌಸ್ ನ ಮಾತುಗಳಂತೆ ಅಲ್ಲಿನ ರೂಮ್‌ಗಳ ಹೆಸರು ಕೂಡಾ ಅಷ್ಟೇ ಆಕರ್ಷಣೀಯವಾಗಿದೆ, ಸಂಪೂರ್ಣ ವಿಷಯವನ್ನು ನೀಡುವ ‘ಹಾಫ್ ಸರ್ಕಲ್’, ನಮ್ಮ ಸಮಯವನ್ನು ಸದುಪಯೋಗಪಡಿಸುವ ‘ಅವಧಿ’, ಕನ್ನಡ ನೆಲದನುಡಿ- ಬದುಕು, ಪರಿಸರ ಸಾರುವ ‘ನಲ್ಮೆಯ ಮಲೆನಾಡು’, ಪ್ರವಾಸದ ರೋಚಕ ಕತೆಹೇಳುವ ‘ ನಮ್ಮ ಕನ್ನಡ’, ಎಲ್ಲರ ವಾಣಿಯನ್ನ ಕೇಳಿಸುವ ‘ವಿಶ್ವ ವಾಣಿ’, ಬಾಲಿವುಡ್‌ನ ಸಿನಿಪಯಣದ ದಾರಿ ಹೇಳುವ ‘ ದಿ ಬಾಲಿವುಡ್ ಫಿಲ್ಮ ಕ್ಲಬ್’ ಅದರಲ್ಲೆ ಚಿತ್ರಕಥೆಗಾರರ ಕಥೆ ಹೇಳುವ ‘ ಇನ್‌ಸೈಡ್ ದಿ ರೈಟರಸ್ ರೊಮ್’, ಪ್ರಾದೇಶಿಕ ಭಾಷೆ, ಸಂಸ್ಕೃತಿಯ ಮಹತ್ವ ಹೇಳುವ ಅನೇಕ ರೂಮ್‌ಗಳನ್ನು ನೀವು ನೋಡಬಹುದು.
ಕ್ಲಬ್ ಹೌಸ್ ಇತ್ತೀಚಿಗೆ ಬಂದರು ಕೂಡಾ ಇದು ಬಳೆಕೆದಾದರಿಗೆ ಯೂಸರ್ ಫ್ರೇಂಡ್ಳೀಯಾಗಿದೆ. ಇಂದಿನ ಸಾಮಾಜಿಕ ಜಾಲಣಗಳು ಎಷ್ಟು ಹುಟ್ಟಿಕೊಳ್ಳುತ್ತವೆಯೊ ಅಷ್ಟೇ ವೇಗವಾಗಿ ಬೆಳೆಯುತ್ತದೆ. ಪ್ರಾರಂಭವಾದ ಕೆಲವೇ ದಿನಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಆಪ್ ಕ್ಲಬ್‌ಹೌಸ್.
ಜಗತ್ತಿನ ಪ್ರತಿಯೊಂದು ಅಂಶದಲ್ಲೂ ಎರಡು ಮುಖಗಳು ಸಾಮಾನ್ಯ. ಅದು ಋಣಾತ್ಮಕವಾಗಿ ಅಥವಾ ಧನಾತ್ಮಕವಾಗಿ ಬೆಳೆಯುವಂತದ್ದು. ಕ್ಲಬ್‌ಹೌಸ್ ಕೂಡಾ ಇದರಿಂದ ಹೊರತಾಗಿಲ್ಲ. ಈ ಎರಡು ಮುಖಗಳನ್ನಾ ನಾವು ಹೇಗೆ ಗೃಹಿಸುತ್ತೆವೆ, ಹೇಗೆ ಉಪಯೋಗಿಸುತ್ತೆವೆ ಅನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ಹಾಗಾಗಿ ಹೊಸ ವಿಚಾರ ತಂತ್ರಜ್ಞಾನವನ್ನು ಸದುಪಯೊಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ, ಹಿತವಾಗಿ, ಮಿತವಾಗಿ ಪ್ರಗತಿಯತ್ತ ಬಳಸಿದರೆ ಇದು ಸರ್ವಕಾಲಕ್ಕೂ ಉತ್ತಮ.
- ವಾಣಿ ಭಟ್ಟ, ಶಿರಸಿ
MCJ ವಿದ್ಯಾರ್ಥಿ