Slide
Slide
Slide
previous arrow
next arrow

ಅಕ್ರಮ ಮರಳುಗಾರಿಕೆಗೆ ಸಿಂಹಸಪ್ನವಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಒಬ್ಬಂಟಿ ಆದರೆ….?

300x250 AD

ಹೊನ್ನಾವರ : ಈ ಹಿಂದೆ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸುಮನ್ ಪೆನ್ನೇಕರ್ ಮತ್ತು ಮಂಕಿ ಪಿ. ಎಸ್. ಐ ನೀತು ಗೂಡೆ ವರ್ಗಾವಣೆಯ ನಂತರ ಜಿಲ್ಲೆಯ ಮಟ್ಟಿಗೆ ಕರ್ತವ್ಯನಿಷ್ಠೆಯಲ್ಲಿ ಸದ್ದು ಮಾಡುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಆಶಾರವರಿಗೆ ಉಳಿದ ಇಲಾಖೆಯ ಸಹಕಾರ ಸಿಗದೆ ಒಬ್ಬಂಟಿ ಆದರೆ ಅನ್ನುವ ಮಾತು ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಸುಹೊದ್ದಿದೆ. ಜಿಲ್ಲೆ ಹೊರಜಿಲ್ಲೆಗೂ ಶರಾವತಿ ನದಿಯ ಮರಳು ಸಾಗಾಣಿಕೆ ಆಗುತ್ತಿದೆ. ತಾಲೂಕಿನ ನದಿ ತೀರದ ಬಹುತೇಕ ಎಲ್ಲೆಡೆ ಮರಳುಗಾರಿಕೆ ನಿರಂತರವಾಗಿದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರು ಸ್ಥಳೀಯ ಅಧಿಕಾರಿಗಳು ಕಂಡು ಕಾಣದಂತೆ ಇರುವಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾರವರು ಆಗಾಗ ದಾಳಿ ಮಾಡುತ್ತಿರುವುದು ಅಕ್ರಮ ಮರಳು ಸಾಗಾಟ ಮಾಡುವವರಿಗೆ ಅಡ್ಡಿ ಆಗಿರುವುದು, ಅವರನ್ನೇ ತಡೆದು ನಿಲ್ಲಿಸಿ ಅವರ ಆತ್ಮ ಸ್ಟೈರ್ಯ ಕುಗ್ಗಿಸುವ ಮಟ್ಟಕ್ಕೆ ತಲುಪಿದೆ. ಬುಧವಾರ ತಾಲೂಕಿನಲ್ಲಿ ನಡೆದ ಬೆಳವಣಿಗೆ ಪ್ರಾಮಾಣಿಕ ಅಧಿಕಾರಿಗಳಿಗೆ ಇದು ಸಕಾಲವಲ್ಲ ಎನ್ನುವ ವಾತಾವರಣ ಶ್ರಷ್ಟಿ ಆದಂತೆ ಬಾಸವಾಗುತ್ತಿದೆ.

ಜಿಲ್ಲೆಯ ಒಬ್ಬ ಹಿರಿಯ ಮಹಿಳಾ ಅಧಿಕಾರಿಯಾಗಿ ತಮ್ಮ ಕರ್ತವ್ಯದಲ್ಲಿರುವಾಗ ಅಡ್ಡಿಪಡಿಸುವ ಮಟ್ಟಕ್ಕೆ ಹೋಗುತ್ತಿರುವುದು ನೋಡಿದರೆ ಆಡಳಿತ ವ್ಯವಸ್ಥೆ ಹಳಿ ತಪ್ಪಿದಂತೆ ಕಂಡು ಬರುತ್ತಿದೆ. ತಾಲೂಕು ಮತ್ತು ಪಂಚಾಯತ ಮಟ್ಟದ ಅಧಿಕಾರಿಗಳು ಇಂತಹ ಅಕ್ರಮ ತಡೆದಿದ್ದರೆ ಜಿಲ್ಲಾಕೇಂದ್ರದಿಂದ ಅಧಿಕಾರಿಗಳು ಬರುವ ಪರಿಸ್ಥಿತಿ ಇರುತ್ತಿರಲಿಲ್ಲ. ಅದರಲ್ಲೂ ಇಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿದ ಇಲಾಖೆಯ ಸಹಕಾರ ಸಿಗದೇ ಇರುವುದು ಪರಿಸ್ಥಿತಿಯ ವಿಪರ್ಯಾಸವಾಗಿದೆ. ಈ ಅಧಿಕಾರಿ ದಾಳಿ ಮಾಡುತ್ತಿರುವುದೇ ಇತರ ಇಲಾಖೆಯ ಅಧಿಕಾರಿಗಳಿಗೆ ಕಿರಿಕಿರಿ ಆದಂತೆ ಅವರ ನಡವಳಿಕೆಯಿಂದ ಕಂಡುಬರುತ್ತಿದೆ. ಒಟ್ಟಾರೆ ಉಳಿದ ಇಲಾಖೆಯ ಸೂಕ್ತ ಸಹಕಾರ ಸಿಗದೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಒಬ್ಬಂಟಿ ಆದರೆ ಎನ್ನುವ ಪ್ರಶ್ನೆ ಮೂಡುವಂತಾಗಿದೆ.

ಪ್ರಾಮಾಣಿಕ ಅಧಿಕಾರಿಗಳಿಗೆ ಜಿಲ್ಲೆ ಸೂಕ್ತವಲ್ಲವೇ :
ಒಬ್ಬ ಸರಕಾರಿ ಅಧಿಕಾರಿ ಕರ್ತವ್ಯದಲ್ಲಿದ್ದಾಗ ಅವರಿಗೆ ಅವಾಜ್ ಹಾಕುತ್ತಿದ್ದಾರೆ ಎಂದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳಿಗೆ ಈ ಜಿಲ್ಲೆ ಸೂಕ್ತವಲ್ಲ ಅನ್ನುವಂತಾಗಿದೆ. ಹೊರ ಜಿಲ್ಲೆಗಳಲ್ಲಿ ಕೇಳಿ ಬರುತ್ತಿದ್ದ ಬೆಳವಣಿಗೆ ಜಿಲ್ಲೆಗೆ ಕಾಲಿಟ್ಟಿರುವುದು ಜನಸಾಮಾನ್ಯರಿಗೆ ದಿಗ್ಬ್ರಮೆ ಮೂಡಿಸಿದೆ. ಬುಧವಾರದ ಆರೋಳ್ಳಿ ಹತ್ತಿರ ನಡೆದ ಬೆಳವಣಿಗೆ ತಾಲೂಕಿನ ಜನರನ್ನ ಬೆರಗು ಗೊಳಿಸಿದೆ.

ಪೊಲೀಸ್ ಠಾಣೆ ಆವರಣದಲ್ಲೆ ಗಲಾಟೆ :
ಘಟನಾ ಸ್ಥಳದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯನ್ನು ಪೊಲೀಸರು ಸೂರಕ್ಷಿತವಾಗಿ ಠಾಣೆಗೆ ಕರೆತಂದ ನಂತರ ಮರಳುಗಾರಿಕೆಗೆ ಸಂಬಂಧ ಪಟ್ಟ ಎರಡು ಗುಂಪುಗಳ ನಡುವೆ ಠಾಣೆಯ ಎದುರುಗಡೆಯಲ್ಲೇ ಮಾತಿನ ಚಕುಮುಖಿ ನಡೆದಿದೆ. ಪೊಲೀಸ್ ಬಯವೇ ಇಲ್ಲದೆ ದೊಡ್ಡದಾಗಿ ಕೂಗಾಡಿ ಕೊಂಡಿದ್ದಾರೆ. ಇವರ ಮಾತಿನ ಸದ್ದು ಇಡೀ ಠಾಣೆಗೆ ಕೇಳಿದ ಮೇಲೆ ಹಿರಿಯ ಅಧಿಕಾರಿಗಳೆ ಇವರ ಹತ್ತಿರ ಬಂದು ಗಲಾಟೆ ಮಾಡದಂತೆ ವಿನಂತಿ ಮಾಡಿಕೊಂಡಿದ್ದಾರೆ.

ಪಾಸ್ ಕೊಟ್ಟರು ಅಕ್ರಮ ಮರಳಿಗಿಲ್ಲ ತಡೆ :
ಅನುಮತಿ ಪಡೆದ ಮರಳು ಸಾಗಾಟದಾರರಿಗೆ ಅವಕಾಶ ಕೊಟ್ಟ ಸಮಯದಲ್ಲು ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ಕೊಡುತ್ತಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಅಕ್ರಮ ಮರಳುಗಾರಿಕೆ ನಡೆದಲ್ಲಿ ಪರವಾನಿಗೆದಾರರಿಗೆ ಹೊಡೆತ ಬೀಳುತ್ತಿದೆ. ಸರಕಾರಕ್ಕೆ ಸಲ್ಲಬೇಕಾದ ರಾಜದನ ತುಂಬಿ ವೃತ್ತಿ ಮಾಡುವವರಿಕ್ಕಿಂತ, ಅಕ್ರಮ ಸಾಗಾಟಕ್ಕೆ ಹೆಚ್ಚು ಅವಕಾಶ ನೀಡಲಾಗುತ್ತಿದೆ ಎನ್ನುವ ಆರೋಪ ಪರವಾನಿಗೆ ದಾರರು ಮಾಡುತ್ತಿದ್ದಾರೆ. ಅದರ ಜೊತೆ ಅನುಮತಿ ಪಡೆದ ಗುತ್ತಿಗೆದಾರರು ಮರಳಿಗೆ ದುಬಾರಿ ಬೆಲೆ ಹಾಕಲಾಕುತ್ತಿದೆ ಎನ್ನುವ ಆರೋಪವು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಚೆಕ್ ಪೋಸ್ಟ್ ಸಿಬ್ಬಂದಿ ಮೇಲೆ ಕ್ರಮವಾಗಲಿ :
ಗೇರುಸೊಪ್ಪದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಮತ್ತು ಮಾವಿನಗುಂಡಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇದೆ. ಅದರ ಮದ್ಯ ಈಗ ಲೋಕಸಭಾ ಚುನಾವಣೆಯ ಚೆಕ್ ಪೋಸ್ಟ್ ಕೂಡ ಕಾರ್ಯನಿರ್ವಹಿಸುತ್ತಿದೆ. ಕುಮಟಾ ತಾಲೂಕಿಗೆ ಸಂಬಂಧ ಪಟ್ಟ ಶಾಂತಗಲ್ ನಲ್ಲಿ ಕೂಡ ಚೆಕ್ ಪೋಸ್ಟ್ ಇದೆ. ಇದ್ದೆಲ್ಲವನ್ನು ದಾಟಿ ಅಕ್ರಮ ಮರಳು ತುಂಬಿದ ವಾಹನ ಮುಂದೆ ಸಾಗುತ್ತಿದೆ. ಅಲ್ಲಿ ಇರುವ ಅಧಿಕಾರಿ, ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದಾರೆಯೇ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದಾರೆ. ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿರುವ ಚೆಕ್ ಪೋಸ್ಟ್ ನಲ್ಲಿರುವ ಸಿಬ್ಬಂದಿಯ ಮೇಲೆ ಕರ್ತವ್ಯ ಲೋಪದ ಕ್ರಮ ತೆಗೆದುಕೊಂಡಲ್ಲಿ ಇಂತಹ ಅಕ್ರಮ ದಂದೆಯನ್ನು ತಡೆಯಬಹುದಾಗಿದೆ.

300x250 AD

ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ಆಗಬೇಕಿದೆ :
ಶರಾವತಿ ನದಿಯಿಂದ ಅಕ್ರಮ ಮರಳು ಪ್ರತಿನಿತ್ಯ ಸಾಗಾಟ ನಡೆಯುತ್ತಿದ್ದರು ಸ್ಥಳೀಯ ಗ್ರಾಮ ಪಂಚಾಯತ, ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಗ್ರಾಮ ಪಂಚಾಯತ ವ್ಯಾಪ್ತಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಆಗಬೇಕಿದೆ.

ತಹಸೀಲ್ದಾರ್ ಮೌನ :
ಇಷ್ಟೆಲ್ಲ ಅಕ್ರಮ ವ್ಯವಹಾರ ನಡೆಯುತ್ತಿದ್ದರು ಏನು ಗೊತ್ತೆ ಇಲ್ಲದಂತೆ ಇರುವ ಆ ಅ ತಾಲೂಕಿನ ತಹಸೀಲ್ದಾರ್ ರವರ ಮೇಲೆ ಬಿಗಿ ಕ್ರಮ ಆಗಬೇಕಿದೆ. ಅಕ್ರಮದ ಸಂತೆ ಆಗುತ್ತಿರುವುದು ಕಣ್ಣ ಮುಂದೆ ಇದ್ದರು ಕ್ರಮಕ್ಕೆ ಮುಂದಾಗದೆ ತಹಸೀಲ್ದಾರ್ ರವರು ಕೂಡ ಪರೋಕ್ಷ ಸಹಕಾರ ನೀಡುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವೃತ್ತಿದಾರರ ಒಳ ಜಗಳ ರಂಪಾಟಕ್ಕೆ ಕಾರಣವಾಯ್ತೆ..?
ವೃತ್ತಿದಾರರ ನಡುವಿನ ಒಳ ಜಗಳ ಈ ಎಲ್ಲಾ ಬೆಳವಣಿಗೆಗೆ ಕಾರಣವಾಗುತ್ತಿದೆಯೇ ಎನ್ನುವ ಚರ್ಚೆ ಅವರಲ್ಲೇ ನಡೆಯುತ್ತಿದೆ. ಒಂದೆರಡು ದಿನದ ಹಿಂದೆ ಇದೆ ವೃತ್ತಿ ಮಾಡುವವರೊಬ್ಬರು ತನ್ನ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಉಳಿದವರ ವಾಹನ ಸಂಚಾರ ಮಾಡದಂತೆ ತಡೆದಿರುವ ಬೆಳವಣಿಗೆ ನಡೆದಿತ್ತು. ಮೇಲ್ನೋಟಕ್ಕೆ ಪರವಾನಿಗೆದಾರರ ಮತ್ತು ಅನದಿಕೃತ ಮರಳು ಸಾಗಾಟದಾರರ ನಡುವಿನ ಜಗಳ ಅಂದುಕೊಂಡರು ಇವರ ಹೊರತಾಗಿ ಮೇಲಧಿಕಾರಿಗಳಿಗೆ ಕೆಲವರು ನೀಡುವ ದೂರಿಗೆ ದಾಳಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ಅನುಮತಿ ಮರಳು ಗಾರಿಕೆ ನಡೆಯುತ್ತಿದ್ದರು ಅಕ್ರಮ ಮರಳು ವಾಹನವನ್ನು ಅಧಿಕಾರಿಗಳು ಹಿಡಿದಿರಲಿಲ್ಲ. ಅವರವರ ನಡುವಿನ ಕಿತ್ತಾಟ ರಂಪಾಟಕ್ಕೆ ಕಾರಣವಾಗುತ್ತಿದೆ.

ಹೊನ್ನಾವರದಲ್ಲೆ ಅಧಿಕಾರಿಗಳ ತಂಡ :
ಬುಧವಾರ ನಡೆದ ಘಟನೆ ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಒಂದು ವಾಹನ ಇನ್ನೂ ಹೊನ್ನಾವದಲ್ಲೇ ಕಾರ್ಯಾಚರಣೆ ನಡೆಸಲಿದೆ. ಅಧಿಕಾರಿಗಳ ಒಂದು ತಂಡ ತಾಲೂಕಿನಲ್ಲಿಯೇ ಉಳಿಯಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಬೈಟ್ಸ್
ಪ್ರಾಮಾಣಿಕ ಅಧಿಕಾರಿಯ ಮೇಲೆ ದೌರ್ಜನ್ಯ ಮಾಡಿರುವುದು ಖಂಡನಿಯ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶ ಮಾಡಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು.

ವಿನೋದ ನಾಯ್ಕ ಮಾವಿನಹೊಳೆ
ಅಧ್ಯಕ್ಷರು
ಶರಾವತಿ ನದಿಯ ಮರಳು ಗುತ್ತಿಗೆ ದಾರರ ಸಂಘ

Share This
300x250 AD
300x250 AD
300x250 AD
Back to top