
ಅಂಕೋಲಾ: ಲಾರಿ ಮತ್ತು ಬೈಕ್ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ನಡೆದಿದೆ.
ಕಾರವಾರ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು ಕಾರವರದಿಂದ ಅಂಕೋಲಾಕ್ಕೆ ಹೊರಟಿದ್ದ ಸಹೋದ್ಯೋಗಿ ಮಿತ್ರರು ಚಲಿಸುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಲಾರಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಹೊನ್ನಳ್ಳಿಯ ರವಿ ಲೋಕು ಗೌಡ(26) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ನಾದ ಹಟ್ಟಿಕೇರಿ ನಿವಾಸಿ ಹರೀಶ್ ಸೋಮು ಗೌಡಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.