• Slide
    Slide
    Slide
    previous arrow
    next arrow
  • ಉತ್ತಮ ಗುರುಗಳ ಮಾರ್ಗದರ್ಶನದಿಂದ ನಿಸ್ಸಂಶಯವಾಗಿ ಯಶಸ್ಸು ಸಾಧ್ಯ:ರಾಜೀವ ನಾಯಕ

    300x250 AD

    ಹೊನ್ನಾವರ: ಹಲವು ಸಮಾಜಮುಖಿ ಕಾರ್ಯದ ಮೂಲಕ ಸಾಮಾಜಿಕ ಕಾರ್ಯದ ಮೂಲಕ ಜನಮನ್ನಣೆ ಪಡೆದ ಸುಮನಾ ಟ್ರಸ್ಟ್ ವತಿಯಿಂದ ನಿವೃತ್ತ ಉಪನ್ಯಾಸಕ ಡಾ.ಶ್ರೀಪಾದ ಶೆಟ್ಟಿಯವರ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ತಾಲೂಕಿನ ಅರೇಅಂಗಡಿಯ ಶ್ರೀಕರಿಕಾನ ಪರಮೇಶ್ವರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜರುಗಿತು.

    ಕಾರ್ಯಕ್ರಮವನ್ನು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ರಾಜೀವ ವಿ.ನಾಯಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಉತ್ತಮ ಗುರುವಿನ ಮಾರ್ಗದರ್ಶನ ಶಿಷ್ಯನಿಗೆ ದೊರೆತರೆ ಆತ ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ಕಲಿಸಿದ ಗುರುಗಳನ್ನು ಸ್ಮರಿಸುವ ಕಾರ್ಯ ಅನುಕರಣನೀಯ ಎಂದರು.

    ತಾ.ಪA. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ಶಿಕ್ಷಕರು ಮನಸ್ಸು ಮಾಡಿದರೆ ಸಮಸಜ ಬದಲಾವಣೆ ಸಾಧ್ಯ. ಸಾಮಾಜಿಕ ಬದಲಾವಣೆಗೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಆ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕಿದೆ.

    ಶಿಕ್ಷಣ ವೃತ್ತಿಬಮೂಲಕ ವಿದ್ಯಾರ್ಜನೆ ಮಾಡಿದ ಡಾ.ಎನ್.ಆರ್.ನಾಯಕ, ಹನುಮಂತ ಭಟ್, ವಿ.ಎಸ್.ಹೆಗಡೆ, ಎನ್.ಎಲ್.ಹೆಗಡೆ, ಕೆ.ಎಸ್.ಹೆಗಡೆ, ಎಸ್.ಜಿ.ಹೆಗಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತ್ರಿ ಪುರಸ್ಕೃತ ಶಿಕ್ಷಕರು ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜೆ.ಕೈರನ್ ಮಾತನಾಡಿ, ಐದು ತಲೆಮಾರು ಉಪಸ್ಥಿತಿ ಇರುವ ಗುರುವಂದನಾ ಕಾರ್ಯಕ್ರಮ ಅಭೂತಪೂರ್ವವಾದದ್ದು. ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಹಾಗೂ ಗುರುಗಳನ್ನು ಸದಾ ಗೌರವಿಸಬೇಕು. ಕಲಿತ ಶಾಲೆ, ಕಲಿಸಿದ ಗುರುಗಳಿಗೆ ಗೌರವಿಸುವ ಗುಣ ಎಲ್ಲರು ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ವೇದಿಕೆಯಲ್ಲಿ ವೈದ್ಯರಾದ ಶಿವಾನಂದ ಹೆಗಡೆ, ಪ್ರಾಚಾರ್ಯರಾದ ವಿ.ಎನ್.ಭಟ್, ಪ್ರಕಾಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕರಾದ ನಿವೃತ್ತ ಉಪನ್ಯಾಸಕರಾಗಿದ್ದ ಶ್ರೀಪಾದ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಸಂದೀಪ ಭಟ್ ಮತ್ತು ಮಹೇಶ ಭಂಡಾರಿ ಅಭಿನಂದನಾ ನುಡಿಗಳ ಮೂಲಕ ಗೌರವಿಸಿದರು. ಕೇಶವ ಶೆಟ್ಟಿ ವಂದಿಸಿ ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top