ಸಿದ್ದಾಪುರ: ಪ್ರಪಂಚದ ಏಕಮೇವ ಯಕ್ಷಗಾನ ವೇಷ ಭೂಷಣ ಧರಿಸಿದ ತಾಲೂಕಿನ ಕಲಗದ್ದೆಯ ಬಲಮೊರೆ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವರಿಗೆ ಮಹಾ ಚೌತಿ ಹಿನ್ನಲೆಯಲ್ಲಿ ವಿಶೇಷ ಸಹಸ್ರಮೋದಕ ಹವನ, ನಾರಿಕೇಳ ಗಣಹವನ ಸೇರಿದಂತೆ ವಿವಿಧ ಪೂಜೆ, ಹವನಗಳು ನಡೆದವು. ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಲೋಕಕಲ್ಯಾಣ ಬಯಸಿ ಪ್ರಾರ್ಥನೆ ನಡೆಸಿದರು.
ಶ್ರೀ ನಾಟ್ಯ ವಿನಾಯಕನಿಗೆ ವಿವಿಧ ಪೂಜೆ ಸಮರ್ಪಣೆ
