
ಶಿರಸಿ: ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ತಾಲೂಕಿನ ಚಿಪಗಿ ದಮನಬೈಲಿನ ವಿನಯ ವಿಘ್ನೇಶ್ವರ ಹೆಗಡೆ 600 ಕ್ಕೆ 600 ಅಂಕಗಳಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ.
ಈ ಪ್ರತಿಭಾವಂತ ವಿದ್ಯಾರ್ಥಿಯು ಮೂಡಬಿದ್ರಿಯ ಎಕ್ಸೆಲೆಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದು ಇವನು ಮೂಲತಃ ದೇವದಕೇರಿಯ ಮಾದೇವಿ ಮತ್ತು ವಿಶ್ವನಾಥ ರಾ. ಹೆಗಡೆ ಇವರ ಮೊಮ್ಮಗ. ವಿದ್ಯಾರ್ಥಿಯ ಈ ಸಾಧನೆಗೆ ಪಾಲಕರು, ಪೋಷಕರು ಹಾಗೂ ಅಧ್ಯಾಪಕರುಗಳು ಹರ್ಷ ವ್ಯಕ್ತಪಡಿಸಿ ಭವಿಷ್ಯದ ಯಶಸ್ಸಿಗೆ ಹಾರೈಸಿದ್ದಾರೆ.