• Slide
    Slide
    Slide
    previous arrow
    next arrow
  • ಕೊಚ್ಚಿ ಹೋದ ಗದ್ದೆ- ತೋಟ; ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಚಿಂಚಳಿಕೆ ಗ್ರಾಮಸ್ಥರು

    300x250 AD

    ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸಮೀಪದ ಚಿಂಚಳಿಕೆ ಗದ್ದೆಯ ಕಂಟ ಒಡೆದು ಇಪ್ಪತ್ತು ಎಕರೆಗೂ ಹೆಚ್ಚು ಗದ್ದೆ ಮತ್ತು ಅಡಿಕೆ ತೋಟ ಸಂಪೂರ್ಣ ನೀರು ಪಾಲಾಗಿದೆ. ಶುಕ್ರವಾರ ಮುಂಜಾನೆ ಐದರ ಸಮಯದಲ್ಲಿ ರಭಸವಾಗಿ ಸುರಿಯುತ್ತಿದ್ದ ಮಳೆಗೆ ಚಿಂಚಳಿಕೆ, ಕಾನಳ್ಳಿ ಊರಿನ ಜನರ ಗದ್ದೆ ಮತ್ತು ತೋಟ ಸಂಪೂರ್ಣ ಮುಳುಗಿದೆ. ಚಿಂಚಳಿಕೆ ಹಾಗೂ ಕಾನಳ್ಳಿ ಊರಿನವರು ಚಿಕ್ಕ ಹಿಡುವಳಿದಾರರಾಗಿದ್ದು, ಭತ್ತ, ಅಡಿಕೆ, ಶುಂಠಿ ನಾಶವಾಗಿದೆ. ಅಲ್ಲದೆ ಮತ್ತೆ ಬೆಳೆಯುವ ಕನಸು ಕೂಡ ನುಚ್ಚು ನೂರಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಣ್ಣು ಗದ್ದೆಯ ಮೇಲೆ ನಿಂತಿದ್ದು ಗ್ರಾಮಸ್ಥರು ಮತ್ತೆ ಬರುವ ಮಳೆಗೆ ಕಂಗಾಲಾಗಿ ನಿಂತಿದ್ದಾರೆ. ತಾವೇ ನಿಂತು ಕಂಟ ಕಟ್ಟುವ ಸ್ಥಿತಿಯಲ್ಲಿಲ್ಲ, ಮತ್ತೆ ಮಳೆ ಬಂದರೆ ಎದುರಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
    ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಕೊಟ್ಟೆಗದ್ದೆ, ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದು, ಅಪಾರ ಹಾನಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಪಂ ಸದಸ್ಯರು, ತಾಲೂಕು ಪಂಚಾಯತ ಸದಸ್ಯರು ಭೇಟಿ ನೀಡಿದ್ದು ತೀವ್ರ ತೊಂದರೆಗೊಳಗಾದ ಗ್ರಾಮಸ್ಥರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

    ಗದ್ದೆಯ ಕಂಟ ಒಡೆದಿದ್ದು ಬಹಳ ಹಾನಿಯಾಗಿದೆ, ಕಟ್ಟುವ ಸ್ಥಿತಿಯಲ್ಲಿ ನಾವಿಲ್ಲ ಬೆಳೆ ಸಂಪೂರ್ಣ ನಾಶವಾಗಿದೆ
    -ಸೀತಾರಾಮ ಗೌಡ ಗ್ರಾಮಸ್ಥ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top