• Slide
    Slide
    Slide
    previous arrow
    next arrow
  • ISSF ವಿಶ್ವಕಪ್ 2022: ಭಾರತಕ್ಕೆ ಚಿನ್ನದ ಪದಕ

    300x250 AD

    ನವದೆಹಲಿ: ಎಲವೆನಿಲ್ ವಲರಿವನ್, ಶ್ರೇಯಾ ಅಗರ್ವಾಲ್ ಮತ್ತು ರಮಿತಾ ಅವರನ್ನೊಳಗೊಂಡ ಭಾರತೀಯ ಮಹಿಳಾ ಶೂಟಿಂಗ್ ತಂಡವು ಬಾಕುದಲ್ಲಿ ನಡೆದ ISSF ವಿಶ್ವಕಪ್ 2022 ನಲ್ಲಿ 10 ಮೀಟರ್ ಏರ್ ರೈಫಲ್ ಮಹಿಳಾ ತಂಡ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗಳಿಸಿದೆ.

    ಬಾಕುದಲ್ಲಿ ನಡೆಯುತ್ತಿರುವ ISSF ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮೂವರು ಡೆನ್ಮಾರ್ಕ್ ತಂಡವನ್ನು 17-5 ಅಂತರದಿಂದ ಸೋಲಿಸಿದರು. ಟೋಕಿಯೊ ಒಲಿಂಪಿಯನ್ ಎಲವೆನಿಲ್ ವಲರಿವನ್ ಅವರು ಫೈನಲ್‌ನಲ್ಲಿ ಎಲ್ಲಾ 11 ಸರಣಿಗಳಲ್ಲಿ 10 ಕ್ಕಿಂತ ಹೆಚ್ಚು ಅಂಕ ಪಡೆದರು.

    ಈ ನಡುವೆ, ರುದ್ರಂಕ್ಷ್ ಬಾಳಾಸಾಹೇಬ್ ಪಾಟೀಲ್, ಪಾರ್ಥ್ ಮಖಿಜಾ ಮತ್ತು ಡೆಫ್ಲಿಂಪಿಕ್ಸ್ ಚಾಂಪಿಯನ್ ಧನುಷ್ ಶ್ರೀಕಾಂತ್ ಒಳಗೊಂಡ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಕಂಚಿನ ಪದಕಕ್ಕಾಗಿ ಕ್ರೊಯೇಷಿಯಾ ವಿರುದ್ಧ 16-10 ರಿಂದ ಸೊಲೊಪ್ಪಿಕೊಂಡಿತು.

    300x250 AD

    ಕೃಪೆ- news13.in

    Share This
    300x250 AD
    300x250 AD
    300x250 AD
    Leaderboard Ad
    Back to top