• Slide
    Slide
    Slide
    previous arrow
    next arrow
  • ಅದ್ದೂರಿಯಾಗಿ ನಡೆದ ರಾಮಮಂದಿರ ಗರ್ಭಗುಡಿ ಶಂಕುಸ್ಥಾಪನಾ ಸಮಾರಂಭ

    300x250 AD

    ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಅಯೋಧ್ಯೆಯಲ್ಲಿ ರಾಮಮಂದಿರದ ಗರ್ಭಗೃಹದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮಂತ್ರಗಳ ಪಠಣದ ನಡುವೆ ದೇವಾಲಯದ ಸ್ಥಳದಲ್ಲಿ ಗೃರ್ಭಗುಡಿಗೆ ಕೆತ್ತಿದ ಕಲ್ಲನ್ನು ಇರಿಸಿದ ಬಳಿಕ ‘ಶಿಲಾ ಪೂಜೆ’ ನೆರವೇರಿಸಲಾಯಿತು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯನಾಥ್, 500 ವರ್ಷಗಳ ಭಕ್ತಾದಿಗಳ ವೇದನೆ ಕೊನೆಗೊಳ್ಳಲಿದೆ, ಈ ದೇವಾಲಯವು ಜನರ ನಂಬಿಕೆಯ ಸಂಕೇತವಾಗಲಿದೆ. ಇದು ‘ರಾಷ್ಟ್ರ ಮಂದಿರ’ ಆಗಲಿದ್ದು, ಅದರ ಕಾರ್ಯ ಭರದಿಂದ ಸಾಗಲಿದೆ ಎಂದರು.

    “ರಾಮಮಂದಿರವು ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ರಾಮಮಂದಿರವು ಭಾರತದ ಏಕತೆಯ ಸಂಕೇತವಾಗಲಿದೆ” ಎಂದು ಅವರು ಹೇಳಿದ್ದಾರೆ

    ರಾಮ ಜನ್ಮಭೂಮಿ ಸ್ಥಳದಲ್ಲಿ ನಿರ್ಮಾಣ ಕಾರ್ಯವು ಆಗಸ್ಟ್ 5, 2020 ರಂದು ಪ್ರಾರಂಭವಾಯಿತು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಡಿಸೆಂಬರ್ 2023 ರ ವೇಳೆಗೆ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲು ನಿರ್ಧರಿಸಲಾಗಿದೆ.

    300x250 AD

    ರಾಮಮಂದಿರದ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸರ್ಕಾರವು ಫೆಬ್ರವರಿ 2020 ರಲ್ಲಿ ಸ್ಥಾಪಿಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (SRJBTK) ಪ್ರಕಾರ, ಮೂರು ಅಂತಸ್ತಿನ ರಚನೆಯನ್ನು ಹೊಂದಿರುವ ದೇವಾಲಯದ ನಿರ್ಮಾಣವು ಭರದಿಂದ ಸಾಗುತ್ತಿದೆ.

    ಕೃಪೆ- news13.in

    Share This
    300x250 AD
    300x250 AD
    300x250 AD
    Leaderboard Ad
    Back to top