• Slide
  Slide
  Slide
  previous arrow
  next arrow
 • ರಾಜ್ಯ ಮಟ್ಟದ ಮಡಿವಾಳ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

  300x250 AD

  ಹೊನ್ನಾವರ: ತಾಲೂಕಿನ ಕವಲಕ್ಕಿಯಲ್ಲಿ ಮಡಿವಾಳ ಪ್ರೆಂಡ್ಸ್ ಆಶ್ರಯದಲ್ಲಿ ಪ್ರಥಮ ವರ್ಷದ ರಾಜ್ಯ ಮಟ್ಟದ ಸೂಪರ್ ಸಿಕ್ಸ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

  ಪಂದ್ಯಾವಳಿ ಉದ್ಘಾಟಿಸಿ ಗ್ರಾ.ಪಂ. ಸದಸ್ಯ ಗೋವಿಂದ ಭಟ್ಟ ಮಾತನಾಡಿ, ಪಂದ್ಯಾವಳಿಗೆ ಶುಭ ಹಾರೈಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಮಾತನಾಡಿ ಸಣ್ಣ ಸಮಾಜವಾದರೂ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿ ಮಡಿವಾಳ ಸಮಾಜ ಸೈ ಎನಿಸಿಕೊಳ್ಳುತ್ತಿದೆ. ಮುಂದು ಕೂಡ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಿ, ಇಂದಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ಸು ಕಾಣಲಿ ಎಂದರು.

  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಿ ಅಂಬಿಗ, ಗ್ರಾ.ಪಂ. ಸದಸ್ಯ ಐ.ವಿ.ನಾಯ್ಕ ನಗರೆ, ಎನ್.ಎಂ.ಭಟ್ಟ ಬೆಕ್ಕುತ್ತೆ, ಮಡಿವಾಳ ಸಂಘದ ಅಧ್ಯಕ್ಷ ನಾಗೇಶ ಮಡಿವಾಳ, ಗ್ರಾ.ಪಂ. ಸದಸ್ಯೆ ಆಶಾ ನಾರಾಯಣ ಹೆಗಡೆ, ಕೃಷ್ಣ ಗೌಡ ಹಳಗೇರಿ ಮಾತನಾಡಿದರು.

  300x250 AD

  ವೇದಿಕೆಯಲ್ಲಿ ಕ್ರೀಡಾಂಗಣ ಉದ್ಘಾಟಕರಾದ ಪ್ರಭಾಕರ ಹೆಗಡೆ ಬೆಕ್ಕುತ್ತೆ, ಶ್ರೀನಿವಾಸ ಎಸ್.ಮಡಿವಾಳ, ವಿನಯ ಶೆಟ್ಟ ಕೊಂಡಕುಳಿ, ಸತ್ಯನಾರಾಯಣ ಹೆಗಡೆ ಆರೋಳ್ಳಿ, ಗಣೇಶ ಮಡಿವಾಳ ನಿವೃತ್ತ ಸೈನಿಕರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top