ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಯ ಎರಡನೇ ಹಂತ ಮಂಗಳವಾರ ಮುಗಿದಿದ್ದು, ಜಿಲ್ಲೆಯಲ್ಲಿ ಒಟ್ಟೂ 76.53% ಮತದಾನವಾಗಿದೆ.
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 80.48%, ಯಲ್ಲಾಪುರ 79.97%, ಭಟ್ಕಳ 76%, ಕುಮಟಾ 76.93%, ಕಾರವಾರ 73.63%, ಹಳಿಯಾಳ 75.91%, ಕಿತ್ತೂರು 76.27%, ಖಾನಾಪುರ 73.85% ರಷ್ಟು ಮತದಾನವಾಗಿದೆ. ಜಿಲ್ಲೆಯ ನಗರ, ಗ್ರಾಮೀಣ ಭಾಗದಲ್ಲಿ ಯಾವುದೇ ಅಡೆತಡೆ ಇಲ್ಲದೇ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಾಮಾನ್ಯರೊಡನೆ ಪಕ್ಷದ ಅಭ್ಯರ್ಥಿಗಳು, ವಿವಿಧ ಪಕ್ಷದ ಕಾರ್ಯಕರ್ತರು ಮತದಾನ ಮಾಡಿದ್ದಾರೆ.