
ಸಿದ್ದಾಪುರ: ತಾಲೂಕಿನ ಶಿರಸಿ ರಾಜ್ಯ ಹೆದ್ದಾರಿಯ ತ್ಯಾಗಲಿಯ ಜೀಕನಮನೆ ಸಮೀಪ ಶುಕ್ರವಾರ ಮುಂಜಾನೆ ಗುಡ್ಡವೊಂದು ರಸ್ತೆ ಮೇಲೆ ಕುಸಿದ ಪರಿಣಾಮ, ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿದೆ. ಸ್ಥಳೀಯಾಡಳಿತ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ 3 ಘಂಟೆ ವೇಳೆಗೆ ಕಾಲ ತೆರವು ಕಾರ್ಯ ಮುಗಿಯಬಹುದು ಎಂದು ಮೂಲಗಳು ತಿಳಿಸಿವೆ. ಮಳೆಯ ರಭಸಕ್ಕೆ ಗುಡ್ಡ ನಿಧಾನವಾಗಿ ಕುಸಿಯುತ್ತಲೇ ಇರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಮತ್ತು ವಾಹನ ಸವಾರರೂ ಸಹ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.